ತಮ್ಮ ಸ್ನೇಹಿತ
ನನ್ನ ಸ್ನೇಹಿತ ವೈದ್ಯ ಇಲ್ಲಿಗೆ ಬಂದು ಬಿಲ್ ಮತ್ತು ಎಲ್ಲ ದಾಖಲೆಗಳನ್ನು ಕೊಡ್ತೇನೆ ಅಂದಿದ್ದಾರೆ. ದುಬೈನಲ್ಲಿ ಈ ವಾಚಿನ ಬೆಲೆ 75 ಸಾವಿರ ದಿರಾಮ್ ಎಂದಿದ್ದಾರೆ. ಇಲ್ಲಿ ಹಣಕ್ಕೆ ಹೋಲಿಸಿದ್ರೆ 14.25 ಲಕ್ಷವಾಗುತ್ತೆ. ಲೋಕಾಯುಕ್ತಕ್ಕೆ ಜೂನ್‌ನಲ್ಲಿ ಆಸ್ತಿ ವಿವರ ನೀಡುವ ವೇಳೆ ಮಾಹಿತಿ ನೀಡ್ತೇನೆ. ಜುಲೈನಲ್ಲಿ ತೆರಿಗೆ ಇಲಾಖೆಗೆ ಮಾಹಿತಿ ನೀಡ್ತೇನೆ. ಇದು ಸೆಕೆಂಡ್ ಹ್ಯಾಂಡ್ ವಾಚ್ ಅಂತಾ ನನ್ನ ಸ್ನೇಹಿತ ಹೇಳಿದ್ದಾನೆ ಎಂದರು.
ಹೆಚ್‌ಡಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಚಿಂತನೆ
ಇನ್ನು ಈ ವಾಚ್ 75 ಲಕ್ಷ ರೂ. ಮೌಲ್ಯದ್ದು ಎನ್ನುವ ಕುಮಾರಸ್ವಾಮಿ ಆರೋಪ ಸತ್ಯಕ್ಕೆ ದೂರ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ. ಕುಮಾರಸ್ವಾಮಿ ಪುತ್ರನ ಕಾರು, ವಾಚ್ ಬಗ್ಗೆ ಪ್ರತಿಕ್ರಿಯಿಸಲ್ಲವೆಂದು ಹೇಳಿದರು.
ಈ ವಾಚ್ ನನಗೆ ಉಡುಗೊರೆಯಾಗಿ ಬಂದಿದ್ದು, ಇದಕ್ಕೆ ಗಿಫ್ಟ್ ಟ್ಯಾಕ್ಸ್ ಕಟ್ಟುತ್ತೇನೆ. ಲೋಕಾಯುಕ್ತ ಹಾಗೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡುತ್ತೇನೆ. ಆದರೆ ಇದನ್ನು ಇನ್ನು ಮುಂದೆ ಧರಿಸುವುದಿಲ್ಲ. ಬದಲಾಗಿ ವಿಧಾನಸೌಧದ ಕ್ಯಾಬಿನೆಟ್ ಹಾಲ್‌ನಲ್ಲಿ ಇಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ವಿವಾದಕ್ಕೆ ತೆರೆ ಎಳೆದರು.