ದೊಡ್ಡ ಸುದ್ದಿ ಹೊಸ ಸುದ್ದಿ

ಸರಕಾರಿ ನೌಕರಿ ಕೊಡಿಸುವ ನೆಪದಲ್ಲಿ ಯುವಕರಿಗೆ ಮೋಸ

ಈ ಸಂಬಂಧ ಉದ್ಯೋಗಾಕಾಂಕ್ಷಿಯಿಂದ ಸುಮಾರು 3 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ, ಶೇಖ್ ಮೆಹಬೂಬ್ ಪಾಶಾ ಎಂಬ ಗಾರ್ಡ್‌ನನ್ನು ನೇರ ಕಾರ್ಯಾಚರಣೆಯ ಮೂಲಕ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳ ಪರಿಚಯ ತನಗಿದ್ದು, 4 ಲಕ್ಷ ರೂಪಾಯಿ ನೀಡಿದರೆ ಕೆಲಸ ಕೊಡಿಸುವುದಾಗಿ ಪಾಶಾ ಯುವಕರನ್ನು ನಂಬಿಸಿದ್ದ ಎನ್ನಲಾಗಿದೆ.

ಪಾಶಾ ಮಾತು ನಂಬಿ ಸುಮಾರು 100ಕ್ಕೂ ಹೆಚ್ಚು ಯುವಕರು ಲಂಚ ನೀಡಲು ಸಿದ್ಧರಾಗಿದ್ದು, ಇದರ ಮಾಹಿತಿ ಅರಿತ ಸಿಬಿಐ ಇನ್ಸಪೆಕ್ಟರ್ ಗೋಪಾಲ್ ರಾವ್ ನೇತೃತ್ವದ ತಂಡ, ಇಂದು ಪಾಶಾ ಮನೆ ಮೇಲೆ ದಾಳಿ ಮಾಡಿ ಲಂಚ ಸ್ವೀಕರಿಸುತ್ತಿದ್ದಾಗ ಆತನನ್ನು ಬಂಧಿಸಿದೆ.

ಈ ಕುರಿತು ಯಾವುದೇ ಮಾಹಿತಿ ನೀಡಲು ನಿರಾಕರಿಸಿರುವ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು, ಪಾಶಾ ಯುವಕರನ್ನು ವಂಚಿಸುತ್ತಿದ್ದ ವಿಷಯ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.