ಟೊರಂಟೊ: ಭಾರತದಲ್ಲಿ ಧೂಮಪಾನ ಮಾಡುವ ಪುರುಷರ ಸಂಖ್ಯೆ 1998 ರಿಂದ 2015 ವರೆಗೆ ಶೇ.35 ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಮೂಲದ ಸಂಶೋಧಕರೊಬ್ಬರ ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.
ಧೂಮಪಾನ ಮಾಡುವ ಮಹಿಳೆಯ ಸಂಖ್ಯೆ ಏರಿಕೆಯಾಗಿಲ್ಲ, 1998 ರಲ್ಲಿ 79 ಮಿಲಿಯನ್ ಇದ್ದ ಧೂಮಪಾನ ಮಾಡುವ 15 -69 ವರ್ಷದ ಪುರುಷರ ಸಂಖ್ಯೆ 2015 ರಲ್ಲಿ 108 ಮಿಲಿಯನ್ ಗೆ ಏರಿಕೆಯಾಗಿದ್ದು ಪ್ರತಿ ವರ್ಷ 1.7 ಮಿಲಿಯನ್ ನಷ್ಟು ಏರಿಕೆಯಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಬಿಎಂಜೆ ಗ್ಲೋಬಲ್ ಹೆಲ್ತ್ ಧೂಮಾಪನ ಮಾಡುವವರ ಸಂಖ್ಯೆ ಬಗ್ಗೆ ಅಧ್ಯಯನ ನಡೆಸಿದ್ದು, ಧೂಮಪಾನದಿಂದ ಒಂದು ಮಿಲಿಯನ್ ಗೂ ಹೆಚ್ಚು ಸಾವು ಸಂಭವಿಸುತ್ತಿದ್ದು 30 – 69 ವಯಸ್ಸಿನ ಶೇ.70 ರಷ್ಟು ಸಾವನ್ನಪ್ಪಿದ್ದಾರೆ ಎಂದು ಅಧ್ಯಯನದಲ್ಲಿ ಭಾಗಿಯಾಗಿರುವ ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಭಾತ್ ಜಾ ಹೇಳಿದ್ದಾರೆ.
ಭಾರತಕ್ಕಿಂತ ಹೆಚ್ಚು ಧೂಮಪಾನಿಗಳನ್ನು ಹೊಂದಿರುವ ಏಕೈಕ ದೇಶ ಚೀನಾ ಆಗಿದೆ. 1998 -2010 ವರೆಗೆ ಭಾರತದಲ್ಲಿನ ಧೂಮಪಾನ ಟ್ರೆಂಡ್ ಆಧರಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ. ಅಧ್ಯಯನ ವರದಿಯ ಪೈಕಿ ಭಾರತದಲ್ಲಿ ಸಾಂಪ್ರದಾಯಿಕ ಬೀಡಿಗಳ ಸ್ಥಾನವನ್ನು ಸಿಗರೇಟ್ ಗಳು ತುಂಬುತ್ತಿರುವುದು ಕಂಡುಬಂದಿದೆ. ನಗರ ಪ್ರದೇಶದಲ್ಲಿ ಶೇ.68 ರಷ್ಟು ದೂಮಪಾನ ಹೆಚ್ಚಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಶೇ.61 ರಿಂದ 77 ರಷ್ಟು ಹೆಚ್ಚಾಗಿದೆ.
ಭಾರತದಲ್ಲಿ ಪುರುಷರು ಜಾಸ್ತಿ ಸಿಗರೇಟ್ ಎಳೆಯೋದು ಗೊತ್ತಾ?
