ದೊಡ್ಡ ಸುದ್ದಿ ಸಿಟಿ ಸುದ್ದಿ

ಬಂದ್ ಮಾಡಿ ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ರೆ ಇನ್ನೂ ಮುಂದೆ ಶಿಕ್ಷೆ ಗ್ಯಾರಂಟಿ

ಬಂದ್ ಅಥವಾ ಪ್ರತಿಭಟನೆ ವೇಳೆ ಉಂಟಾಗುವ ಆಸ್ತಿ – ಪಾಸ್ತಿ ಹಾನಿಗೆ, ಪ್ರತಿಭಟನೆಗೆ ಕರೆ ನೀಡಿದ ಸಂಘಟನೆ, ಪಕ್ಷದ ನಾಯಕರನ್ನು ಹೊಣೆ ಮಾಡುವ ವಿಧೇಯಕ ಮಂಡನೆಗೆ ಗೃಹ ಇಲಾಖೆ ನಿರ್ಧರಿಸಿದೆ.

ಇತ್ತೀಚೆಗೆ ಪಟೇಲ್, ಕಾಪು ಮತ್ತು ಜಾಟ್ ಸಮುದಾಯದವರು ನಡೆಸಿದ ಮೀಸಲುಹೋರಾಟದ ವೇಳೆ, ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಆಗಿತ್ತು. ಅಲ್ಲದೇ ಖಾಸಗಿಯವರೂ ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ಸಾರ್ವಜನಿಕ ಆಸ್ತಿ – ಪಾಸ್ತಿ ಹಾನಿ ಕಾಯಿದೆ ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ 1984ರ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಕಾಯಿದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.

ಯುಪಿಎ ಅಧಿಕಾರಾವಧಿಯಲ್ಲಿ ಇಂತಹ ಕಾಯಿದೆ ಜಾರಿಗೆ ಉದ್ದೇಶಿಸಲಗಿತ್ತು. ನಾನಾ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಎನ್ ಡಿಎ ಸರಕಾರ ಈ ಉದ್ದೇಶಕ್ಕೆ ಮರು ಜೀವ ನೀಡಿದೆ. ಹೊಸ ಕಾಯಿದೆಯ ಕರಡು ಸಿದ್ದಪಡಿಸುತ್ತಿದ್ದು, ಇದಕ್ಕೆ ಸಚಿವ ಸಂಪುಟ ಅನುಮತಿ ದೊರೆತರೆ, ಬಜೆಟ್ ಅಧಿವೇಶನದಲ್ಲೇ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ಗೃಹ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಂಡ ವಸೂಲಿ: ಕಾನೂನು ಜಾರಿಯಾದರೆ, ಪ್ರತಿಭಟನೆಗೆ ಕರೆ ನೀಡಿದ ಸಂಘಟನೆ ಅಥವಾ ಪಕ್ಷವೇ ನಷ್ಟದ ಹಣವನ್ನು ಭರಿಸಬೇಕು. ಅಲ್ಲದೇ ಇನ್ಸೂರೆನ್ಸ್ ಇಲ್ಲದ ಆಸ್ತಿ ಹಾನಿಯಾದರೂ ಅದರ ನಷ್ಟವನ್ನು ಸಂಬಂಧಿತ ಪಕ್ಷ ಅಥವಾ ಸಂಘಟನೆ ಭರಿಸಬೇಕು ಎಂಬ ಅಂಶವನ್ನು ವಿಧೇಯಕದಲ್ಲಿ
ಸೇರಿಸಲಾಗಿದೆ.