ದೊಡ್ಡ ಸುದ್ದಿ ಲೈಫ್ ಸ್ಟೈಲ್

ನೀವು ಚೆನ್ನಾಗಿ ಬದುಕಲು ಈ ಸೂತ್ರ ಪಾಲಿಸಿ

  1. ಚೆನ್ನಾಗಿ ನೀರು ಕುಡಿಯಿರಿ. ಇದರಿಂದ ದೇಹ ಆರೋಗ್ಯಯುತವಾಗಿರುತ್ತದೆ. ಅಷ್ಟೇ ಅಲ್ಲಾ ಅದರೊಂದಿಗೆ ಫ್ರೆಶ್‌ ಆಗಿ ಆಕ್ಟೀವ್‌ ಆಗಿರಲು ಸಹ ಸಹಾಯಕವಾಗಿದೆ.
  2. ಚೆನ್ನಾಗಿ ನಿದ್ರೆ ಮಾಡಿ. ಪ್ರತಿಯೊಬ್ಬ ಮನುಷ್ಯನಿಗೆ ನಿದ್ರೆ ಬೇಕೇ ಬೇಕು. ಒಂದು ದಿನದಲ್ಲಿ ಕಡಿಮೆ ಎಂದರೆ 6 ರಿಂದ 8 ಗಂಟೆ ನಿದ್ರೆ ಮಾಡಲೇಬೇಕು. ಚೆನ್ನಾಗಿ ನಿದ್ರೆ ಮಾಡಿದರೆ ಸ್ಟ್ರಾಂಗ್‌ ಆಗುತ್ತೀರಿ.
  3. ಪಿಜ್ಜಾ, ಬರ್ಗರ್‌ ಎಲ್ಲಾ ಜಂಕ್‌ ಫುಡ್‌ ಬಿಟ್ಟು ಬಿಡಿ. ಈ ಆಹಾರ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ  ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಇದು ನಾಲಿಗೆಗೆ ರುಚಿ ನೀಡಬಹುದು. ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದುದರಿಂದ ಆರೋಗ್ಯಕರ ಆಹಾರ ಸೇವನೆ ಮಾಡಿ.
  4. ಮೆಡಿಕಲ್‌ ಚೆಕ್‌ಅಪ್‌. ನಮ್ಮ ದೇಹವನ್ನು ಹಲವಾರು ರೋಗಗಳು ಅಥವಾ ಸಮಸ್ಯೆಗಳು ಬಾಧಿಸುತ್ತದೆ. ಆದುದರಿಂದ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ಒಂದು ಬಾರಿಯಾದರೂ ಹೆಲ್ತ್‌ ಚೆಕ್‌ಅಪ್‌ ಮಾಡಿಸಿಕೊಳ್ಳುವುದು ಉತ್ತಮ.
  5. ವರ್ಕಿಂಗ್‌ ಔಟ್‌ ಅಂದರೆ ಜಿಮ್‌ಗೆ ಹೋಗುವುದು, ಪುಶ್‌ಅಪ್‌ ಮಾಡೋದು ಅಲ್ಲಾ. ಅದರ ಬದಲಾಗಿ ದಿನದಲ್ಲಿ 2 ಗಂಟೆ ಕಡಿಮೆ ಎಂದರೆ 1 ಗಂಟೆಯಾದರೂ ವ್ಯಾಯಾಮ, ಜಾಕಿಂಗ್‌, ವಾಕಿಂಗ್‌ ಅಥವಾ ಸ್ಲೈಕಿಂಗ್‌ ಮಾಡಿ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.