ದೊಡ್ಡ ಸುದ್ದಿ

ಟೆನ್ನಿಸ್ ಆಟಗಾರ್ತಿ ಶೆರಪೋವಾ ಡ್ರಗ್ಸ್‌‌ ಸೇವನೆ ಸಾಬೀತು: ಅಮಾನತು ಭೀತಿ

ಈ ವರ್ಷದ ಆರಂಭದಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌‌ ಟೂರ್ನಿಯ ವೇಳೆ ನಡೆದ ಡ್ರಗ್ಸ್‌ ಸೇವನೆ ಪರೀಕ್ಷೆಯಲ್ಲಿ ಶೆರಪೋವಾ ವಿಫಲರಾಗಿದ್ದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶೆರಪೋವಾ ತಾವು ಕಳೆದ 10 ವರ್ಷಗಳಿಂದ ಮಿಲ್ದ್ರೋನೇಟ್‌ ಎಂಬ ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಸೇವಿಸುತ್ತಿದ್ದೆ. ಅಂದಿನಿಂದಲೂ ಮಿಲ್ದ್ರೋನೇಟ್‌ ಅನ್ನು ಡ್ರಗ್ಸ್‌‌ ಎಂದು ಪರಿಗಣಿಸಿರಲಿಲ್ಲ. ಆದರೆ 2016ರ ಜ.1ರಂದು ವಿಶ್ವ ಮಾದಕ ವಸ್ತು ಸೇವನೆ ವಿರೋಧಿ ಎಜೆನ್ಸಿ (ವಾಡಾ) ಮಿಲ್ದ್ರೋನೇಟ್‌ ಅನ್ನು ನಿಷೇಧಿತ ವಸ್ತು ಎಂದು ಘೋಷಿಸಿದೆ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಮಾರಿಯಾ ಶೆರಪೋವಾ ಅವರು ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದು 5 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ಡ್ರಗ್ಸ್‌ ಸೇವನೆಯಿಂದ ಅಂತಾರಾಷ್ಟ್ರೀಯ ಟೆನ್ನಿಸ್‌ನಿಂದ 2 ವರ್ಷಗಳ ಕಾಲ ಅಮಾನತಾಗುವ ಭೀತಿಯಲ್ಲಿದ್ದಾರೆ.