ಹೆಲ್ತ್ ಪ್ಲಸ್

ಬೆಳಗ್ಗಿನ ಹೊತ್ತಿನ ಬಿಸಿನೀರಿನ ಸ್ನಾನ ಚರ್ಮಕ್ಕೆ ಪೆಟ್ಟು !

ಪದೇ ಪದೇ ಸ್ನಾನ ಮಾಡುವುದೆಂದರೆ ಕೆಲವರಿಗೆ ಬಹಳ ಇಷ್ಟ. ಚಳಿಗಾಲದಲ್ಲಂತೂ ಬಿಸಿ ನೀರಿನಲ್ಲಿ ಸ್ನಾನ ಮಾಡುವುದೆಂದರೆ ಇನ್ನೂ ಡಬಲ್ ಖುಷಿ. ಸ್ನಾನ ಮಾಡುವುದರಿಂದ ದೇಹದ ಇಂದ್ರೀಯಗಳು ಪುನರ್‌ಯೌವನಗೊಳ್ಳಬಹುದು. ಆದರೆ ಅನಾವಶ್ಯಕವಾಗಿ ಪದೇ ಪದೇ ಸ್ನಾನ ಮಾಡುವುದು ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎನ್ನುವುದು ತಜ್ಞರ ಮಾತು.
ಬೆಳಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ನಿಮ್ಮ ಚರ್ಮದ ರಂಧ್ರಗಳು ತೆರೆಯುತ್ತವೆ. ಸಾಬೂನಿನ ಪರಿಮಳ ನಿಮ್ಮ ಚರ್ಮದ ಮೇಲೆ ಸುಗಂಧವನ್ನು ಬೀರುತ್ತದೆ. ಆದರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಸ್ನಾನ ಮಾಡುವುದು ನಿಮ್ಮ ಚರ್ಮದ ಮೇಲೆ ಅಡ್ಡ ಪರಿಣಾಮ ಬೀಳುತ್ತದೆ ಎನ್ನುತ್ತಾರೆ ತಜ್ಞರು.

 

* ಹೆಚ್ಚು ಬಿಸಿ ನೀರಿನ ಬಳಕೆ ಬೇಡ

ಡಿಸೆಂಬರ್ ತಿಂಗಳಿನಿಂದ ಚಳಿಗಾಲ ಪ್ರಾರಂಭವಾಗುತ್ತದೆ. ಚಳಿಗಾಲದಲ್ಲಿ ಎಲ್ಲರೂ ಬಿಸಿ ನೀರಿಗೆ ಮೊರೆ ಹೋಗುತ್ತಾರೆ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಅದು ನಿಮ್ಮ ದೇಹಕ್ಕೆ ಸ್ವಲ್ಪ ಬೆಚ್ಚನೆಯನ್ನು ನೀಡಬಹುದು. ಆದರೆ ಅದರಿಂದ ಚರ್ಮಕ್ಕೆ ಹಾನಿಯಾಗುತ್ತದೆ.

* ಎಲ್ಲಾ ಭಾಗಗಳಿಗೂ ಸಾಬೂನು ಬೇಡ

ತೇವಾಂಶ ಕಡಿಮೆ ಇರುವ ಭಾಗಗಳಲ್ಲಿ ಸಾಬೂನು ಹಾಕುವ ಅಗತ್ಯವಿರುವುದಿಲ್ಲ. ಸಾಬೂನನ್ನು ಕೇವಲ ಚರ್ಮ ಮಡಚುವ ಜಾಗದಲ್ಲಿ ಹಾಗೂ ಕೈ ಕಾಲುಗಳಿಗೆ ಹಾಕಿದರೆ ಸಾಕು. ಉಳಿದ ಭಾಗಗಳಿಗೆ ನಾಜೂಕಾದ ಸೋಪ್ ಬಳಸಿದರೆ ಸಾಕು.

ಸ್ನಾನಕ್ಕೆ ಬಹಳ ಹೊತ್ತು ತೆಗೆದುಕೊಳ್ಳ ಬೇಡಿ

ದೀರ್ಘಾವದಿ ಸ್ನಾನ ಮಾಡುವುದರಿಂದ ಅದು ನಿಮ್ಮ ತ್ವಚೆಯಲ್ಲಿರುವ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತದೆ. ಇದರಿಂದ ನಿಮ್ಮ ತ್ವಚೆ ಒಣಗುತ್ತದೆ. ಆದ್ದರಿಂದ ಬೇಗನೆ ನಿಮ್ಮ ಸ್ನಾನವನ್ನು ಮುಗಿಸಿ, ಬಹಳ ಹೊತ್ತು ಸ್ನಾನ ಮಾಡಿದಷ್ಟು ತ್ವಚೆಯ ಕಾಂತಿ ಮಾಯವಾಗುತ್ತದೆ.