ನಮ್ಮ ಪಾಸ್ವರ್ಡ್ ಇತರರಿಗೆ ಗೊತ್ತಾದ್ರೆ ಆಗೋ ಅನಾಹುತಗಳ ಬಗ್ಗೆ ನಿಮಗೆ ಗೊತ್ತಿರುತ್ತೆ. ಬ್ಯಾಂಕ್ ಅಕೌಂಟ್ ಪಾಸ್ವರ್ಡ್ ಇತರರಿಗೆ ಗೊತ್ತಾದ್ರೆ ನಮ್ಮ ಅಕೌಂಟ್ ಖಾಲಿ ಆಗುತ್ತೆ. ಫೇಸ್ಬುಕ್ ಅಕೌಂಟ್ ಪಾಸ್ವರ್ಡ್ ಬೇರೊಬ್ಬರಿಗೆ ಗೊತ್ತಾದರೆ ನಿಮ್ಮ ಅಕೌಂಟ್ನಲ್ಲಿ ಅಸಭ್ಯ ಫೋಟೋ ಬರಹ ಬಂದು ಅಪ್ಪಳಿಸಬಹುದು. ಆದಕ್ಕೇ ಪಾಸ್ವರ್ಡ್ ವಿಷಯದಲ್ಲಿ ಬಹಳ ಹುಶಾರ್ ಆಗಿರಬೇಕು.
ಕೆಲವರು ಪಾಸ್ವರ್ಡ್ ಸುಲಭವಾಗಿ ನೆನಪಿರಬೇಕು ಎನ್ನುವ ಕಾರಣಕ್ಕೆ ವೀಕ್ ಪಾಸ್ವರ್ಡ್ ಬಳಸುತ್ತಿರುತ್ತಾರೆ. ಸ್ಪ್ಲಾಶ್ ಡ್ಯಾಟಾ ಎನ್ನೋ ಸಂಸ್ಥೆ ವಿಶ್ವದಾದ್ಯಂತ ಜನ ಬಳಸುತ್ತಿರುವ 25 ವೀಕ್ ಪಾಸ್ವರ್ಡ್ಗಳನ್ನು ಗುರುತಿಸಿ ಅವುಗಳ ಪಟ್ಟಿ ರಿಲೀಸ್ ಮಾಡಿದ್ದಾರೆ. ಬಹಳ ಜನ ಈ 25 ಪಾಸ್ವರ್ಡ್ಗಳನ್ನು ಬಳಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಸ್ಪ್ಲಾಶ್ ಡಾಟಾ ಸಂಸ್ಥೆ ಹೇಳಿದೆ.
ಪ್ರತಿ ವರ್ಷ ಜನವರಿಯಲ್ಲಿ ಈ ಸಂಸ್ಥೆ ಎಷ್ಟು ಜನ ಎಂತಹ ಪಾಸ್ವರ್ಡ್ ಬಳಸುತ್ತಾರೆ ಎಂಬುದರ ಕುರಿತು ಸಮೀಕ್ಷೆ ನಡೆಸುತ್ತಂತೆ. ಈ ವರ್ಷದ ಸಮೀಕ್ಷೆಯಲ್ಲಿ ಹಿಂದಿನಂತೆ 123456, password ಬಹಳವಾಗಿ ಬಳಕೆಯಲ್ಲಿ ಇವೆಯಂತೆ. ಸ್ಪೋರ್ಟ್ಸ್, ಪಾಪ್ ಕಲ್ಚರ್ ಎನ್ನೋ ಪದಗಳನ್ನು ಬಹಳ ಜನ ಪಾಸ್ವರ್ಡ್ಗಳಾಗಿ ಬಳಸುತ್ತಿದ್ದಾರಂತೆ. ಇಂತಹ ಪಾಸ್ವರ್ಡ್ಗಳು ಸುಲಭವಾಗಿ ಹ್ಯಾಕರ್ಗಳಿಗೆ ಎಟುಕುತ್ತವೆ. ಆದ್ದರಿಂದ ಪಾಸ್ವರ್ಡ್ಗಳ ವಿಷಯದಲ್ಲಿ ಎಚ್ಚರದಿಂದ ಇರಬೇಕು ಎಂದು ಸ್ಪ್ಲಾಶ್ ಡಾಟಾ ಸಿಇಒ ಮೊರ್ಗಾನ್ ಸ್ಲಯನ್ ಸೂಚಿಸಿದ್ದಾರೆ.