ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಶೇನ್ ವಾಟ್ಸನ್‌ಗೆ ಬಂಪರ್ ಬೆಲೆ ಯುವಿ ಕುಸಿದ ಮೌಲ್ಯ

ಕಳೆದ ಎರಡು ಆವೃತ್ತಿಗಳಲ್ಲಿ ದುಬಾರಿ ಬೆಲೆಗೆ ಆರ್‌ಸಿಬಿ ಹಾಗೂ ಡೆಲ್ಲಿ ತಂಡದ ಪಾಲಾಗಿದ್ದ ಯುವರಾಜ್ ಸಿಂಗ್ ಈ ಬಾರಿ ಹೈದರಾಬಾದ್‌ ಸನ್‌ರೈಸರ್ಸ್‌ ತಂಡದ ಪಾಲಾಗಿದ್ದಾರೆ. 7 ಕೋಟಿ ರೂಗೆ ಅವರು ಬಿಕರಿಯಾಗಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್‌ಮನ್‌ ಶೇನ್‌ ವ್ಯಾಟ್ಸನ್‌ 9.5 ಕೋಟಿಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ.
ಉಳಿದಂತೆ ಕೆವಿನ್‌ ಪೀಟರಸನ್‌ 3.5 ಕೋಟಿ, ಬೌಲರ್‌ ಇಶಾಂತ್‌ ಶರ್ಮಾ 3.8 ಕೋಟಿಗೆ ಪುಣೆ ತಂಡ ಸೇರಿಕೊಂಡಿದ್ದಾರೆ. ಡ್ವೇನ್‌‌ ಸ್ಮೀತ್‌ 2.3 ಕೋಟಿಗೆ ಗುಜರಾತ್‌ ಲಯನ್ಸ್‌ ತಂಡ, 5.5 ಕೊಟಿಗೆ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಆಶಿಶ್‌ ನೆಹ್ರಾ ಬಿಕರಿಯಾಗಿದ್ದಾರೆ. ಸಂಜು ಸ್ಯಾಮ್ಸನ್‌‌‌ ಡೆಲ್ಲಿ ಡೇರ್‌ ಡೆವಿಲ್ಸ್‌‌ ತಂಡ 4.2 ಕೋಟಿ, ದಿನೇಶ್ ಕಾರ್ತಿಕ್ ಗುಜರಾತ್ ಲಯನ್ಸ್ ತಂಡ 2.3 ಕೋಟಿ, ಜೋಸ್ ಬಟ್ಲರ್‌ ಮುಂಬೈ ಇಂಡಿಯನ್ಸ್ ತಂಡ 3.8 ಕೋಟಿ, ಇರ್ಫಾನ್‌ ಪಠಾಣ್‌ ಪುಣೆ ವಾರಿಯರ್ಸ್‌‌ ತಂಡ 1 ಕೋಟಿ, ಕ್ರಿಸ್ ಮೊರಿಸ್ ಡೆಲ್ಲಿ ಡೇರ್‌ ಡೆವಿಲ್ಸ್‌‌ ತಂಡ 7 ಕೋಟಿ, ಕಾಲಿನ್ ಮುನ್ರೊ ಕೋಲ್ಕತಾ ನೈಟ್ ರೈಡರ್ಸ್ ತಂಡ 30 ಲಕ್ಷ , ಕನ್ನಡಿಗ ಸ್ಟುವರ್ಟ್ ಬಿನ್ನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2 ಕೋಟಿಗೆ ಹರಾಜು ಆಗಿದ್ದಾರೆ.