ದೊಡ್ಡ ಸುದ್ದಿ ಸಿಟಿ ಸುದ್ದಿ

6 ಗಂಟೆ ಟ್ರಾಫಿಕ್ ಜಾಮ್ ಮಾಡಿದ ಜೇನು ನೋಣಗಳು !

ಜೇನು ನೋಣಗಳು ಎಂದಾದರೂ ಟ್ರಾಫಿಕ್ ಜಾಮ್ ಮಾಡಿದ್ದು ಗೊತ್ತಾ..? ಆದರೆ ಜೈಪುರ್‌ನಲ್ಲಂತೂ ಜೇನು ನೋಣಗಳು ಹೆದ್ದಾರಿಗೆ ಬಂದ್ ಭರ್ತಿ6 ಗಂಟೆಗಳ ವಾಹನ ಸವಾರರಿಗೆ ಕಿರುಕುಳ ಕೊಟ್ಟ ಸ್ಯಾಂಪಲ್‌ವೊಂದು ಕಣ್ಣ ಮುಂದೆ ಬಂದಿದೆ.

ಜೈಪುರ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಪನ್ ಟ್ರಕ್‌ವೊಂದು ಸಾಗುತ್ತಿತ್ತು. ಇದರಲ್ಲಿ 1೦೦ಕ್ಕೂ ಅಧಿಕ ಜೇನು ನೋಣಗಳ ಪೆಟ್ಟಿಗೆಗಳಿತ್ತು. ಅದರಲ್ಲಿ ಕೆಲವು ಜೇನು ಪೆಟ್ಟಿಗೆಗಳು ಗೊತ್ತಿಲ್ಲದೇ ಓಪನ್ ಆಗಿ ಹೋಯಿತು. ಜೈಪುರ ಎಂದರೆ ಕೇಳಬೇಕಾ… ಸಾಕಷ್ಟು ವಾಹನಗಳು ಓಡಾಡುವಂತಹ ಪ್ಲೇಸ್. ಈ ಜೇನು ನೋಣಗಳು ಸೇರಿಕೊಂಡು ವಾಹನ ಸವಾರರ ಮೇಲೆ ಅಟ್ಯಾಕ್ ಮಾಡಲು ಆರಂಭ ಮಾಡಿದವು.

ಅದರಲ್ಲಿ 22 ಮಂದಿಯಂತೂ ಗಂಭೀರವಾಗಿ ಜೇನು ನೋಣಗಳಿಂದ ಕಚ್ಚಿಸಿಕೊಂಡು ಆಸ್ಪತ್ರೆಯ ಪಾಲಾದರು. ಉಳಿದವರು ರಸ್ತೆಯಲ್ಲಿ ಉಳಿದು ಹೋದರು. ಈ ಎಲ್ಲ ಘಟನೆಯಿಂದ ೬ ಗಂಟೆಗಳ ಕಾಲ ಫುಲ್ ಟ್ರಾಫಿಕ್ ಜಾಮ್ ಮಾಡಿದ ಕೀರ್ತೀಗೆ ಈ ಜೇನು ನೋಣಗಳು ಸೇರಿಕೊಳ್ಳುತ್ತದೆ.