ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಪ್ರಧಾನಿ ಮೋದಿ ನಟ ಅಕ್ಷಯ್ ಕುಮಾರ್‌ನ ಪುತ್ರ ಕಿವಿ ಹಿಂಡಿದ್ಯಾಕೆ !

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪುತ್ರ ಅರವ್‌ನ ಕಿವಿಯನ್ನು ಪ್ರಧಾನಿ ನರೇಂದ್ರ ಮೋದಿ ಹಿಂಡುವ ಮೂಲಕ ಸುದ್ದಿಯಾಗಿದ್ದಾರೆ. ವಿಜಾಗಾದಲ್ಲಿ ನಡೆಯುತ್ತಿದ್ದ ಇಂಟರ್‌ನ್ಯಾಷನಲ್ ಫ್ಲೈಟ್ ರಿವ್ಯೂ( ಐಎಫ್‌ಆರ್)ನಲ್ಲಿ ಈ ದೃಶ್ಯ ಕಂಡು ಬಂತು.

ಈ ಕಾರ್‍ಯಕ್ರಮದಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ ಬಹಳಷ್ಟು ಗಣ್ಯರು ನರೇಂದ್ರ ಮೋದಿಯ ಜತೆಯಲ್ಲಿ ನಿಂತು ಫೋಟೋ ಕ್ಲಿಕ್ ಮಾಡುವ ಉತ್ಸಾಹ ಕಾಣಿಸಿಕೊಂಡಿತು. ಇದೇ ಸಮಯದಲ್ಲಿ ಅಕ್ಷಯ್ ಕುಮಾರ್ ಅವರ ಪುತ್ರ ಅರವ್ ಕೂಡ ಅಲ್ಲಿ ಇದ್ದರು. ಈ ಕಾರ್‍ಯಕ್ರಮದ ಬ್ರಾಂಡ್ ಅಂಬಾಸೀಡರ್ ಕೂಡ ಅಕ್ಷಯ್ ಕುಮಾರ್ ಆಗಿದ್ದರು.

ತನ್ನ ಪುತ್ರ ಕುರಿತು ಮೋದಿ ಅವರಲ್ಲಿ ಹೇಳಿದಾಗ ಹುಡುಗ ಸಾಣೇ ತುಂಟ ಇದ್ದಾನೆ. ಒಳ್ಳೆಯ ಹುಡುಗನಾಗುತ್ತಾನೆ ಎನ್ನುವ ಮೂಲಕ ಪ್ರೀತಿಯಿಂದ ಕಿವಿ ಹಿಂಡಿದರು. ಈ ವಿಚಾರ ಅಕ್ಕಿಗೂ ಬಹಳ ಖುಷಿಯಾಗಿದೆ. ಅದನ್ನು ಪೋಟೋ ಮೂಲಕ ತೆಗೆದು ತಮ್ಮ ಫೇಸ್‌ಬುಕ್‌ನಲ್ಲಿ ಲೋಡ್ ಮಾಡಿದ್ದಾರೆ. ಟೈಮ್ ಸಿಕ್ಕರೆ ಜಸ್ಟ್ ನೋಡಿ ಬನ್ನಿ.