ಮೂರನೇ ಲಿಂಗಿಯರು ಬಳಕುವ ಪರಿ ನೋಡಿದರೆ ಮನ್ಸಸಿನ ಆಳದಲ್ಲಿ ಸೌಂದರ್ಯದ ಹೊಸ ಅಧ್ಯಾಯ ಹುಟ್ಟಿಕೊಳ್ಳಬಹುದು.
ಇದೇ ಮೊದಲ ಬಾರಿಗೆ ಮಂಗಳಮುಖಿಯರ ಮಾಡೆಲಿಂಗ್ ಸಂಸ್ಥೆಯೊಂದು ಆರಂಭಗೊಂಡಿದೆ. ಹೌದು.., ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚೆಟ್ರಿ ಟ್ರಸ್ಟ್ ಮಂಗಳಮುಖಿಯರಿಗಾಗಿ ಮಾಡೆಲಿಂಗ್ ಸಂಸ್ಥೆ ಆರಂಭಿಸಿದೆ. ಮಂಗಳ ಮುಖಿಯರಲ್ಲೂ ಅನೇಕರು ಸುಂದರವಾಗಿದ್ದು, ಅವರು ಇಂತಹ ಅವಕಾಶಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮಾಡೆಲಿಂಗ್ ಸಂಸ್ಥೆ ಆರಂಭಿಸಿರುವುದಾಗಿ ಮುಖ್ಯಸ್ಥರು ಹೇಳುತ್ತಾರೆ.
ಅದಕ್ಕಾಗಿ ಅವರು ದೇಶಾದ್ಯಂತ ಆಡಿಷನ್ ನಡೆಸಲಿದ್ದು, ಅದರಲ್ಲಿ ಪಾಸಾಗುವವರಿಗೆ ಇಲ್ಲಿ ತರಬೇತಿ ನೀಡಲಾಗುವುದು ಜತೆಗೆ ದೇಶದ ಪ್ರಮುಖ ಸುದ್ದಿ ವಾಹಿನಿ, ಜಾಹೀರಾತು ಮ್ಯಾಗಜೀನ್ಗಳಲ್ಲಿ ಕೆಲಸ ದೊರಕಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ಇದಕ್ಕಾಗಿ ಅರ್ಹತಾ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಪಾಸಾಗುವವರ ಫೋಟೊ ಶೂಟ್ ನಡೆಸಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.