ಹಳ್ಳಿಯಲ್ಲಿ ೩ಜಿ ಬಿಡಿ ೧ಜಿ ಸಿಗುವುದು ಕೂಡ ಗ್ಯಾರಂಟಿ ಇಲ್ಲ. ಆದರೆ ಗೂಗಲ್ ಸಂಸ್ಥೆ ಎಲ್ಲವನ್ನು ಮೀರಿಸಿ ನಿಲ್ಲುವ ೫ ಜಿ ಮೇಲೆ ಕಣ್ಣು ಹಾಕಿದೆ. ಮುಖ್ಯವಾಗಿ ಈಗಾಗಲೇ ದೇಶದ ಕೆಲವು ಭಾಗದಲ್ಲಿ ೪ ಜಿ ಕಾರ್ಯ ಚಟುವಟಿಕೆ ಮಾಡಿಕೊಂಡು ಬಂದಿದೆ. ಈಗ ಗೂಗಲ್ ತನ್ನ ಹೊಸ ಯೋಜನೆಯಾದ ‘ಸ್ಕೈ ಬೆಂಡರ್’ ಎನ್ನುವ ಹೆಸರಿನ ಮೂಲಕ ೫ ಜಿ ಯನ್ನು ಯಶಸ್ವಿಯಾಗಿ ಹಳ್ಳಿಯ ಮನೆಯ ಮೂಲೆಗೂ ತಲುಪಿಸುವ ಕೆಲಸವನ್ನು ಮಾಡಲಿದೆಯಂತೆ.
ಇದಕ್ಕಾಗಿ ನ್ಯೂ ಮೆಕ್ಸಿಕೋದಲ್ಲಿ ಸೋಲಾರ್ ಆಧಾರಿತ ಇಂಟರ್‌ನೆಟ್ ಡ್ರೋಣ್‌ಗಳನ್ನು ಬಳಸುವ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಇದಕ್ಕೆ ‘ ಸ್ಕೈ ಬೆಂಡರ್’ ಎಂದು ಹೆಸರು ನೀಡಲಾಗಿದೆ. ಇದರಲ್ಲಿ ವೇವ್ ರೇಡಿಯೋ ಟ್ರಾನ್ಸಿಮಿಶನ್‌ಗಳನ್ನು ಆಳವಡಿಸಿಕೊಂಡು ೫ಜಿ ವಯರ್‌ಲೆಸ್ ಇಟಂರ್‌ನೆಟ್ ನೀಡುವ ಕೆಲಸಕ್ಕೆ ಬುನಾದಿ ಹಾಕಲಿದೆ.