ದೊಡ್ಡ ಸುದ್ದಿ ಸಿಟಿ ಸುದ್ದಿ ಹೊಸ ಸುದ್ದಿ

ವಿಚ್ಛೇಧನಕ್ಕೂ ಆಮಂತ್ರಣ ಪತ್ರ ಸಿದ್ಧಮಾಡಿಕೊಂಡ

ಇಲ್ಲೊಬ್ಬ ಮಹಾಶಯ ಜೀವನದಲ್ಲಿ ಒಂದಲ್ಲ, ಎರಡೆರಡು ಬಾರಿ ಇನ್ವಿಟೇಶನ್ ಕೊಡಲು ಮನೆ ಮನೆ ಸುತ್ತಿದ್ದಾನೆ. ಅಂದ್ರೆ ಎರಡನೇ ಮದುವೆ ತಯಾರಿನಾ ಅಂತಾ ಅನ್ಕೊಬೇಡಿ. ಈ ಪುಣ್ಯಾತ್ಮ ಮದ್ವೆ ಇನ್ವಿಟೇಶನ್ ಕಾರ್ಡ್‌ ಕೊಟ್ಟು ಸಾಕಾಗದೆ ಇದೀಗ ಡಿವೋರ್ಸ್‌ ಇನ್ವಿಟೇಶನ್ ಕಾರ್ಡ್‌ ಹಂಚಲು ಬೀದಿ ಬೀದಿ ಸುತ್ತುತ್ತಿದ್ದಾನೆ.

ಹೌದು, ಪತಿಯೋರ್ವ ತನ್ನ ವಿಚ್ಚೇದನೆಯ ಕಾರ್ಡ್‌ ಪ್ರಿಂಟ್ ಹಾಕಿಸಿದ್ದು, ನ್ಯಾಯಾಲಯದಲ್ಲಿ ಡಿವೋರ್ಸ್‌ ಪೇಪರ್‌ಗೆ ಸಹಿ ಮಾಡುವಾಗ ಹಾಜರಿರುವಂತೆ ತನ್ನ ನೆಂಟರಿಗೆ ಹಾಗೂ ಗ್ರಾಮದ ಪಂಚಾಯ್ತಿ ಸದಸ್ಯರಿಗೆ ಡಿವೋರ್ಸ್‌ ಇನ್ವಿಟೇಶನ್ ಕಾರ್ಡ್‌ ಹಂಚಿದ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ನಾರಾಯಣಗಿರಿಯ ಸುರೇಶ್ ಹಾಗೂ ಉಮಾ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಸುರೇಶ್ ವರದಕ್ಷಿಣೆಗಾಗಿ ಉಮಾಳನ್ನು ಪೀಡಿಸುತ್ತಿದ್ದು, ಇದರಿಂದ ಬೇಸತ್ತ ಉಮಾ ಗಂಡನ ಮನೆ ಬಿಟ್ಟು ತವರು ಮನೆಗೆ ಹೋಗಿದ್ದಾಳೆ.

ಇದರಿಂದ ಸಿಟ್ಟಾದ ಸುರೇಶ್, ತಾನು ಉಮಾಳಿಗೆ ಡಿವೋರ್ಸ್‌ ನೀಡುತ್ತಿದ್ದು, ಫೆಬ್ರುವರಿ 14ರಂದು ನೆಂಟರೆಲ್ಲಾ ಡಿವೋರ್ಸ್‌ ಸಮಾರಂಭಕ್ಕೆ ಬರುವಂತೆ ಇನ್ವಿಟೇಶನ್ ಕಾರ್ಡ್‌ ಹಂಚಿ ಬಂದಿದ್ದಾನೆ. ಸುರೇಶ್‌‌‌ನ ಈ ದುಷ್ಕೃತ್ಯ ಖಂಡಿಸಿರುವ ಗ್ರಾಮಸ್ಥರು, ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಡಿವೋರ್ಸ್‌ ಇನ್ವಿಟೇಶನ್ ಕಾರ್ಡ್‌ ಹಂಚಿ ಸುರೇಶ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.