ಕ್ರೀಡಾ ಸುದ್ದಿ ದೊಡ್ಡ ಸುದ್ದಿ

ಸೆಲೆಬ್ರಿಟಿ ಕ್ರಿಕೆಟ್‌: ಫೈನಲ್‌ಗೆ ಲಗ್ಗೆ ಇಡುತ್ತಾ ಕಿಚ್ಚ ಟೀಂ

ಕಳೆದ ವರ್ಷ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ತೆಲುಗು ವಾರಿಯರ್ಸ್‌ ತಂಡ ಸಿಸಿಎಲ್‌ನ ಕಪ್‌ನ್ನು ತಮ್ಮದಾಗಿಸಿಕೊಂಡಿತ್ತು. ಅದಕ್ಕಿಂತಲೂ ಮೊದಲು 2013, 2014ರಲ್ಲಿ ಸಿಸಿಎಲ್‌ ಕಪ್‌ ಕರ್ನಾಟಕದ ಪಾಲಾಗಿತ್ತು. ಈ ಬಾರಿ ಯಾರು ಸಿಸಿಎಲ್‌ ಕಪ್‌ನ್ನು ಕೊಂಡೊಯ್ಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇಂದು ಸಂಜೆ ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಎರಡು ಸೆಮಿಫೈನಲ್‌ ನಡೆಯಲಿದ್ದು, ಸುದೀಪ್‌ ನೇತೃತ್ವದ ಕರ್ನಾಟಕ ಬುಲ್ಡೋಜರ್ರ್ಸ್ ತಂಡ ಫೈನಲ್‌ಗೆ ಲಗ್ಗೆ ಇಡಲಿದೆಯೇ ಇಲ್ಲ ಮನೆಗೆ ವಾಪಸ್ಸು ಮರಳಲಿದೆಯೇ ಎಂದು ಕಾದು ನೋಡಬೇಕಾಗಿದೆ.

ಇಂದು ಮಧ್ಯಾಹ್ನ 2ಗಂಟೆಗೆ ನಡೆಯುವ ಸೆಮಿಫೈನಲ್‌ ಮೊದಲ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ರ್ಸ್ ಹಾಗೂ ಬೆಂಗಾಲ್ ಟೈಗರ್ಸ್ ಮೊದಲು ಆಟವಾಡಲಿದ್ದು, ನಂತರ ಸಂಜೆ 7ಗಂಟೆಗೆ ನಡೆಯೋ ಪಂದ್ಯದಲ್ಲಿ ತೆಲುಗು ವಾರಿಯರ್ಸ್‌ ಹಾಗೂ ಭೋಜ್ ಪುರಿ ದಬಂಗ್ಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಗೆದ್ದ ಪಡೆಗೆ ಫೈನಲ್‌ ನಲ್ಲಿ ಆಡೋ ಅವಕಾಶವಿದ್ದು, ಸೋತ ತಂಡವು ನೇರವಾಗಿ ತವರಿಗೆ ಮರಳಲಿದೆ.