ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಕುಡ್ಲ ಕೆಫೆ ಫಸ್ಟ್ ರಿಪೋರ್ಟ್ ಔಟ್

ಕೋಸ್ಟಲ್‌ವುಡ್ ಅಂಗಳದಲ್ಲಿ ಬಿರುಸಿನಿಂದ ಬಂದ ‘ಕುಡ್ಲ ಕೆಫೆ’ ಚಿತ್ರ ಎಂಚಾ ಉಂಡು ಮಾರಾಯ್ರೆ( ಹೇಗೆ ಉಂಟು ಮಾರಾಯ್ರೆ) ಅಂತಾ ಪ್ರಶ್ನೆ ಕೇಳಿದರೆ ಪ್ರೇಕ್ಷಕರಿಂದ ಬಂದ ಉತ್ತರ ನಾಟ್ ಗುಡ್ ನಾಟ್ ಬ್ಯಾಡ್ ಎನ್ನುವ ಮಿಶ್ರಣದ ಉತ್ತರ ರಫ್ ಅಂತಾ ಬಂದು ಬಿಡುತ್ತದೆ.
ಅಂದಹಾಗೆ ‘ಕುಡ್ಲ ಕೆಫೆ’ ಚಿತ್ರದ ಕತೆ ಉತ್ತಮವಾಗಿದ್ದಾರೆ ಇದರ ಜತೆಯಲ್ಲಿ ಚಿತ್ರಕತೆ ಎಳೆದ ರೀತಿಯಲ್ಲಿ ನೋಡಿದರೆ ತುಂಬಾ ಬೇಸರ ಹುಟ್ಟಿಸುತ್ತದೆ. ಸುದೀರ್ಘವಾಗಿ ಕತೆ ಮುಂದೆ ಸಾಗಬೇಕು ಎನ್ನುವ ರೀತಿಯಲ್ಲಿ ಕತೆಯನ್ನು ಚಿತ್ರದಲ್ಲಿ ಪೋಣಿಸಲಾಗಿದೆ. ತುಳುವಿನಲ್ಲಂತೂ ಇದೊಂದು ಉತ್ತಮ ಪ್ರಯೋಗ. ರೀ- ರೆಕಾರ್ಡಿಂಗ್‌ನಲ್ಲಿ ಚಿತ್ರ ಸಂಪೂರ್ಣ ನೆಲ ಕಚ್ಚಿದೆ. ಅಂದಹಾಗೆ ಉಳಿದಂತೆ ಒಂದ್ ಸಲ ಈ ಚಿತ್ರವನ್ನು ನೋಡುವುದರಲ್ಲಿ ತಪ್ಪೇನೂ ಇಲ್ಲ.