ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಐಶ್‌ ಅಂದ್ರೆ ಸಲ್ಲುಗ್ಯಾಕೆ ಆ ಪರಿ ಹುಚ್ಚು

ಇಷ್ಟು ಹೆಂಗೆಳೆಯರ ಪೈಕಿ ಸಲ್ಮಾನ್‌ ಲೈಫ್‌ನಲ್ಲಿ ಬ್ಯೂಟಿ ಕ್ವೀನ್‌ ಐಶ್ವರ್ಯ ರೈ ಮೇನ್‌ ಲವ್‌ ಫ್ರೆಂಡ್‌. ಸಲ್ಲೂ ಲವ್‌ ಸ್ಟೋರಿ ಮಾತ್ರ ಸಿನಿ ರಸಿಕರ ಮನದಲ್ಲಿ ಹಾಗೆಯೇ ಉಳಿದುಬಿಟ್ಟಿದೆ.

ಸಲ್ಮಾನ್‌ ಹಾಗೂ ಐಶ್ವರ್ಯ ಬಿ -ಟೌನ್‌ನಲ್ಲೇ ತೆರೆಮೇಲಿನ  ಬೆಸ್ಟ್‌  ಕಪಲ್‌ ಎಂದು ಖ್ಯಾತಿಯೂ ಪಡೆದಿದ್ರು.  ಸಲ್ಮಾನ್‌ ಎಂದ್ರೆ ಯಾವತ್ತೂ ಸೀರಿಯಸ್‌ ಆಗಿರೋ ವ್ಯಕ್ತಿ. ಅದ್ಹೇಗೆ ಆಗ ತಾನೇ ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಐಶ್ವರ್ಯ ಹಿಂದೆ ಬಿದ್ರು ಎನ್ನೋದೇ ವಿಪರ್ಯಾಸ. ಅದಕ್ಕೆ ಉತ್ತರ ಇಲ್ಲಿದೆ.

ಐಶ್ವರ್ಯ ರೈ ಅಂದ್ರೆ ತನಗೆ ಯಾಕೆ ಅಷ್ಟೊಂದು ಹುಚ್ಚು ಎನ್ನುವುದನ್ನು ಸಲ್ಮಾನ್‌ 17 ವರ್ಷದ ಹಿಂದೆ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಐಶ್‌ ಬಗ್ಗೆ ತಮ್ಮ ಫೀಲಿಂಗ್ಸ್‌ನ್ನು ಹೇಳಿಕೊಂಡಿದ್ದಾರೆ.

”ನಾನು ಐಶ್‌ನ್ನು ಪ್ರೀತಿಸುತ್ತೇನೆ. ಇದು ಆಕೆಯ ಬಗೆಗಿರುವ ಹದಿಹರೆಯದ ಗೀಳಲ್ಲ.  ಐಶ್‌ ಮೇಲೆ ನನಗಿರುವುದು ನಿಜವಾದ ಪ್ರೀತಿ.  ಐಶ್‌ ನಿಜವಾಗಿಯೂ ಸಂಪ್ರದಾಯಿಕ ಹಿಂದೂಸ್ತಾನಿ ಹುಡುಗಿ. ಆಕೆ ತನ್ನ ಹೆತ್ತವರನ್ನು ಪ್ರೀತಿಸುವ ರೀತಿ, ಅವರನ್ನು ಗೌರವಿಸುವುದು ಇದೆಲ್ಲಾ ಐಶ್‌ ಬಗೆಗೆ ನನ್ನಲ್ಲಿ ಗೌರವ ಹೆಚ್ಚಲು ಕಾರಣವಾಯಿತು. ಆಕೆಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿತು” ಎಂದಿದ್ದಾರೆ ಸಲ್ಲೂ.

ಐಶ್‌ ಹಾಗೂ ಸಲ್ಲೂ ಈಗ ತಮ್ಮ ತಮ್ಮ ಜೀವನದಲ್ಲಿ ಮುಂದುವರಿದಿದ್ದಾರೆ. ಅವರ ಪ್ರೇಮ ಕಥೆ ಈಗ ಏನಿದ್ದರೂ ಅದೊಂದು ಇತಿಹಾಸ. ಆದರೂ ಇವತ್ತಿಗೂ ಆ ಹಳೇ ನೆನಪು ಅವರ ಬೆನ್ನು ಬಿಟ್ಟಿಲ್ಲ.  ಸಲ್ಲೂ ಮನಸ್ಸಿನಲ್ಲಿ ಈಗಲೂ ಐಶ್‌ ಬಗ್ಗೆ ಸಾಫ್ಟ್‌ ಕಾರ್ನರ್‌ ಇದೆ ಅನ್ನೋದು ಮಾತ್ರ ನಿಜ.

ಸದ್ಯಕ್ಕೆ ಸಲ್ಮಾನ್‌ ತಮ್ಮ ಮುಂಬರುವ ಚಿತ್ರ ಸುಲ್ತಾನ್‌ನ ಶೂಟಿಂಗ್‌ನಲ್ಲಿ ಬಿಸಿಯಾಗಿದ್ದಾರೆ. ಈ ಚಿತ್ರದಲ್ಲಿ ರೆಸ್ನರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈದ್‌ ಹೊತ್ತಿಗೆ ಈ ಚಿತ್ರ ತೆರೆ ಕಾಣಲಿದೆ.