44 ವರ್ಷದ ಕರಣ್ ಜೋಹರ್ ಈವರೆಗೂ ಅವಿವಾಹಿತ. ಮದುವೆ ಇಲ್ಲ ಅಂದ್ರೆ ಮಕ್ಕಳ ಬಗ್ಗೆ ಮಾತನಾಡುವಂತಿಲ್ಲ. ಇಂತಹ ಕರಣ್ ಜೋಹರ್ ಬಹಳಷ್ಟು ಸಂದರ್ಭಗಳಲ್ಲಿ ಯಾವುದಾದ್ರೂ ಮಗುವನ್ನು ದತ್ತು ಪಡೆದು ಬೆಳೆಸುವುದಾಗಿ ಹೇಳುತ್ತಿದ್ದರು. ಅದು ಯಾವಾಗ ಸಾಕಾರಗೊಳ್ಳುತ್ತೆ ಅಂತಾ ಜನ ನಿರೀಕ್ಷಿಸುತ್ತಿದ್ದಾರೆ.
ಆದರೆ ಈ ಮಧ್ಯೆ ಕರಣ್ ಒಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ‘ ನನ್ನ ಹತ್ತಿರ ಹಣ, ಆಸ್ತಿ ನಟಿ ಆಲಿಯಾ ಭಟ್‌ಗೆ ಹೋಗುತ್ತೆ’ ಎಂದಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಆಲಿಯಾ ಭಟ್‌ಗೆ ಬಾಲಿವುಡ್‌ನಲ್ಲಿ ಲೈಫ್ ಕೊಟ್ಟವರು ಕರಣ್ ಜೋಹರ್. ‘ಸ್ಟೂಡೆಂಟ್ ಆಫ್ ದ ಇಯರ್’ ಚಿತ್ರದಿಂದ ಅವರ ನಡುವೆ ಒಂದು ಬಾಂಡ್ ಬೆಳೆದಿದೆಯಂತೆ. ಬಹಳ ಕಡೆ ಇವರು ಒಟ್ಟೊಟ್ಟಿಗೆ ಸುತ್ತಾಡಿದ್ದಾರೆ. ಜನಕ್ಕೆ ಕಾಣಿಸಿಕೊಂಡಿದ್ದಾರೆ. ಕರಣ್ ಒಂಥರಾ ಆಲಿಯಾಗೆ ಗಾರ್ಡಿಯನ್ ಥರ ಬಿಹೇವ್ ಮಾಡ್ತಾರೆ ಎನ್ನೋ ಟಾಕ್ ಬಾಲಿವುಡ್‌ನಲ್ಲಿ ಹರಿದಾಡ್ತಿದೆ. ಈಗ ತಮ್ಮ ಹಣ, ಆಸ್ತಿಯೆಲ್ಲ ಆಲಿಯಾಗೆ ಸೇರುತ್ತೆ ಎನ್ನುತ್ತಿರುವ ಕರಣ್ ಅಲಿಯಾಗೆ ಬಗ್ಗೆ ಎಷ್ಟು ಅಭಿಮಾನಿಸ್ತಾರೆ ಎಂಬುದು ಸ್ಪಷ್ಟವಾಗ್ತಿದೆ ಎನ್ನುವುದು ಕೆಲವರ ಮಾತು.
ಕರಣ್ ಜೋಹರ್ ಅವರು ಆಲಿಯಾ ಭಟ್ ಕುರಿತ ಈ ಹೇಳಿಕೆಗೆ ಒಂದೇ ಅರ್ಥವಿದೆಯಾ ಅಥವಾ ಮತ್ತೇನಾದ್ರು ಒಳಾರ್ಥವಿದೆಯಾ ಎಂಬುದು ಸ್ಪಷ್ಟವಾಗಿಲ್ಲ. ಇದಕ್ಕೆ ಆಲಿಯಾ ಭಟ್ ಏನಂತಾರೆ ಎಂಬುದನ್ನು ಕಾದು ನೋಡಬೇಕಿದೆ.