ಚೆನ್ನೈಯಲ್ಲಿರುವ ಅಬ್ದುಲ್ ಗಣಿ ಎನ್ನುವ ಮುಸ್ಲಿಂ ಉದ್ಯಮಿಯೊಬ್ಬರು ಆಂಧ್ರ ಪ್ರದೇಶದಲ್ಲಿರುವ ತಿರುಪತಿ ದೇವಸ್ಥಾನಕ್ಕೆ ತರಕಾರಿಗಳನ್ನು ಸಾಗಿಸುವ ಕೆಲಸಕ್ಕೆ ಶೀತಲೀಕೃತವಾದ ಟ್ರಕ್‌ವೊಂದನ್ನು ದಾನವಾಗಿ ಕೊಟ್ಟಿದ್ದಾರೆ. 8ಟನ್‌ಗಳನ್ನು ಹೊತ್ತುಕೊಂಡು ಸಾಗಿಸುವ ಈ ಟ್ರಕ್ ಮೌಲ್ಯ ಬರೋಬರಿ 35 ಲಕ್ಷ ರೂಪಾಯಿ.
ಫೆಬ್ರವರಿ 15ರಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಘನ ಉಪಸ್ಥಿತಿಯಲ್ಲಿ ಈ ಟ್ರಕ್‌ನ್ನು ದೇವಸ್ಥಾನಕ್ಕೆ ನೀಡಲಾಯಿತು. ತಿರುಪತಿಯಲ್ಲಿ ಪ್ರತಿ ದಿನನೂ ಕೊಡುವ ಯೋಜನೆಗೆ ‘ನಿತ್ಯ ಅನ್ನದಾನ’ ಎನ್ನುವ ಹೆಸರು ಕೊಡಲಾಗಿದೆ. 2007ರಿಂದ ಇಂತಹ ಯೋಜನೆಗೆ ತರಕಾರಿಗಳನ್ನು ಕೊಡುವವರು ಮಾಧವ ರಾವ್ ಅವರ ಕುಟುಂಬಿಕರು ಎನ್ನುವುದು ಇಲ್ಲಿ ಗಮನಿಸಬೇಆದ ವಿಷ್ಯಾ.