ಈ ವಿಧಾನವನ್ನು ಬಳಸುವ ಮೂಲಕ ನೀವು ಇಂಟರ್‌ನೆಟ್ ಬಳಕೆ ಮಾಡದೆ ಉತ್ತಮ ಕ್ವಾಲಿಟಿಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ನೋಡಬಹುದು. ಅಲ್ಲದೆ ನೆಟ್ ಡಾಟಾ ವ್ಯಯಿಸಬೇಕು ಎಂದು ಸಹ ಇಲ್ಲ. ಆಫ್‌ಲೈನ್ ವಿಡಿಯೋ ನೋಡುವ ವಿಧಾನ ಈ ರೀತಿಯಾಗಿದೆ.
YouTube ನ ಆಫ್‌ಲೈನ್ ಫೀಚರ್‌ನಿಂದ ನೀವು ನಿಮ್ಮ ಇಷ್ಟ ಬಂದ ವಿಡಿಯೋವನ್ನು ನಿಮ್ಮ ಫೋನ್ ಮೆಮೊರಿ ಕಾರ್ಡ್‌ನಲ್ಲಿ ಸುಲಭವಾಗಿ ಸೇವ್ ಮಾಡಬಹುದು. ಇಂತಹ ವಿಡಿಯೋವನ್ನು ನೀವು ಇಂಟರ್‌ನೆಟ್ ಇಲ್ಲದೆ ಹಲವಾರು ಬಾರಿ ನೋಡಬಹುದು ಹಾಗೂ ಕೇಳಬಹುದು. ಈ ರೀತಿ ವಿಡಿಯೋವನ್ನು ಹಲವು ಬಾರಿ ನೋಡುವುದರಿಂದ ಇಂಟರ್‌ನೆಟ್ ಖರ್ಚಾಗುವುದಿಲ್ಲ.
ಹೀಗೆ ನೋಡಿ ಇಂಟರ್‌ನೆಟ್ ಇಲ್ಲದೆ ವಿಡಿಯೋ…
- ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್‌ಫೋನ್ ಮೂಲಕ ನಿಮಗೆ ಇಷ್ಟವಾದ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ. ನಂತರ ಡೌನ್‌ಲೋಡ್ ಬಟನ್ ಕ್ಲಿಕ್ ಮಾಡಿ.
- ನಿಮಗೆ ಆಫ್‌ಲೈನ್ ವಿಡಿಯೋ ಯಾವ ರಿಜಲ್ಯೂಶನ್‌ನಲ್ಲಿ ಡೌನ್‌ಲೋಡ್ ಮಾಬೇಕು… ಅದಕ್ಕಾಗಿ ಅಲ್ಲಿ ನೀಡಿರುವ ನಾರ್ಮಲ್ ಅಥವಾ ಹೈ ರಿಜಲ್ಯೂಶನ್ ಆಪ್ಷನ್ ಸೆಲೆಕ್ಟ್ ಮಾಡಿ.
- ವಿಡಿಯೋ ಡೌನ್‌ಲೋಡ್ ಮಾಡಿದ ನಂತರ ಮೇಲಿನ ಭಾಗದಲ್ಲಿ ರೈಟ್ ಚಿಹ್ನೆ ಬರುತ್ತದೆ. ಇದರ ನಂತರ ನೀವು ಆ ಹಾಡು ಅಥವಾ ವಿಡಿಯೋವನ್ನು ಮೆನ್ಯುವಿನ ಆಫ್‌ಲೈನ್‌ಗೆ ಹೋಗಿ ಸೆಲೆಕ್ಟ್ ಮಾಡಬಹುದು.
- ಈ ವಿಡಿಯೋ ಫೋನ್‌ನಲ್ಲಿ ಆಫ್‌ಲೈನ್ ಸೇವ್ ಆಗುತ್ತದೆ. ನಂತರ ನೀವು ಇದನ್ನು ಯಾವಾಗ ಬೇಕಾದರು ಎಷ್ಟು ಸಲ ಬೇಕಾದರು ನಿಮ್ಮ ಮೊಬೈಲ್ ಡಾಟಾ ಖರ್ಚು ಮಾಡದೆ ನೋಡಬಹುದು.