ಆದರೆ ಒತ್ತಡದಿಂದ ಬರುವ ತಲೆನೋವಿಗೆ ಮಾತ್ರೆಗಳ ಮೊರೆ ಹೋಗಬೇಕಿಲ್ಲ. ಸಿಂಪಲ್ ಆಗಿ ಒಂದು ಚಟುವಟಿಕೆ ಮಾಡಿದ್ರೆ ಸಾಕು ತಲೆನೋವು ಶಮನವಾಗುತ್ತೆ ಎನ್ನುತ್ತಾರೆ ಬ್ರಿಟನ್ನ ತಜ್ಞ ವೈದ್ಯೆ ಜೆನ್ ಲಿಯೋನಾರ್ಡ್.ಅವರ ಪ್ರಕಾರ ತಲೆನೋವು ಬಂದಾಗ ಪೆನ್ಸಿಲ್ ಅಥವಾ ಅದರಂತಹ ವಸ್ತುವೊಂದನ್ನು ಕೆಲಹೊತ್ತು ಹಲ್ಲುಗಳ ಮಧ್ಯೆ ಚಿತ್ರದಲ್ಲಿ ತೋರಿಸಿದಂತೆ ಇರಿಸಿಕೊಂಡರೆ ಸಾಕಂತೆ. ಪೆನ್ಸಿಲ್ನಂತಹ ವಸ್ತುವನ್ನು ಹಲ್ಲುಗಳ ಮಧ್ಯೆ ಕಚ್ಚಿಟ್ಟುಕೊಳ್ಳುವುದರಿಂದ ದವಡೆಯ ಕಂಡಗಳು, ಸ್ನಾಯುಗಳು ರಿಲ್ಯಾಕ್ಸ್ ಆಗುತ್ತವಂತೆ. ಇದರಿಂದ ಕ್ರಮೇಣ ತಲೆನೋವು ತಗ್ಗುತ್ತದಂತೆ. ತಲೆನೋವು ಬಂದಾಗ ಒಂದ್ಸಲ ಹೀಗೆ ಮಾಡಿ ನೋಡಿ.
ತಲೆನೋವು ಬಂದ್ರೆ ಹೀಗೆ ಮಾಡಿ
February 19, 2016
297 Views
-
Share This!













