ದೊಡ್ಡ ಸುದ್ದಿ ಲೈಫ್ ಸ್ಟೈಲ್

ಈ ಹವ್ಯಾಸಗಳು ನಿಮ್ಮನ್ನು ಹೆಚ್ಚು ವಯಸ್ಸಾದವರಂತೆ ಕಾಣುವಂತೆ ಮಾಡುತ್ತೆ…

ಕಾರಣ ನೀವೆ… ನಿಮಗೆ ಗೊತ್ತಿಲ್ಲದೆ ಅಥವಾ ಅದು ತಪ್ಪು ಎಂದು ನಿಮಗೆ ತಿಳಿಯದೇ ನೀವು ಮಾಡುವ ತಪ್ಪು ನಿಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ.

ನಿದ್ರೆ ಸರಿಯಾಗಿರದಿದ್ದರೆ : ರಾತ್ರಿ ಲೇಟ್‌ ಆಗಿ ನಿದ್ರೆ ಮಾಡುವುದು ಅಥವಾ ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಕಣ್ಣಿನ ಸುತ್ತಲೂ ಡಾರ್ಕ್‌ ಸರ್ಕಲ್‌ ಅಥವಾ ನೆರಿಗೆ ಏರ್ಪಡುತ್ತದೆ. ಇದರಿಂದ ನೀವು ಏಜ್‌ ಆದವರಂತೆ ಕಾಣುತ್ತೀರಿ.

ಆಲ್ಕೋಹಾಲ್‌ ಸೇವನೆ : ವಾರದಲ್ಲಿ ಒಂದು ಸಲ ಅಥವಾ ಎರಡು ಸಲ ಡ್ರಿಂಕ್ಸ್‌ ಮಾಡೋದು ಓಕೆ. ಆದರೆ ಹೆಚ್ಚಾಗಿ ಆಲ್ಕೋಹಾಲ್‌ ಸೇವನೆ ಮಾಡುವುದರಿಂದ ರಕ್ತ ನಾಳಗಳು ಡ್ಯಾಮೇಜ್‌ ಆಗಿ ವಯಸ್ಸಾದವರಂತೆ ಕಾಣುತ್ತದೆ.

ಸೂರ್ಯನ ತೀಕ್ಷ್ಣ ಬೆಳಕಿನಿಂದ :
ಸೂರ್ಯನ ಕಿರಣಗಳಲ್ಲಿರುವ ವಿಟಾಮಿನ್‌ ಡಿ ದೇಹಕ್ಕೆ ಉತ್ತಮ. ಆದರೆ ಅದು ಹೆಚ್ಚಾದಾಗ  ಇದು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸಹ ನೀವು ಹೆಚ್ಚು ವಯಸ್ಸಾದವರಂತೆ ಕಾಣಿಸುತ್ತೀರಿ.

ಹೆಚ್ಚಾಗಿ ಓಡುವುದರಿಂದ : ಯೆಸ್‌ ಓಡುವುದು ಒಳ್ಳೆಯದು ಆದರೆ ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹೆಚ್ಚಾಗಿ ಓಡುವುದರಿಂದ ಮುಖದ ಮೇಲೆ ರಿಂಕಲ್‌ ಮೂಡುತ್ತದೆ.

ಹೆಚ್ಚಾಗಿ ಸಕ್ಕರೆ ಅಂಶ ಸೇವಿಸಿದರೆ : ಸಕ್ಕರೆ ಅಂಶ ಹೆಚ್ಚಾಗಿ ಸೇವನೆ ಮಾಡುವುದರಿಂದ ನಿಮ್ಮ ಸೊಂಟ ಮತ್ತು ಸ್ಕಿನ್‌ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಸಕ್ಕರೆ ಅಂಶ ಸೇವನೆ ಮಾಡುವ ಮೊದಲು ಜಾಗೃತ ವಹಿಸಿ.