ಕೇಂದ್ರ ಸರ್ಕಾರಿ ನೌಕರರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸದ್ಯದಲ್ಲೇ ಸಿಹಿ ಸುದ್ದಿ ನೀಡುವ ಸಾಧ್ಯತೆ ಕಂಡುಬಂದಿದೆ. ತುಟ್ಟಿಭತ್ಯೆ(ಡಿಎ) ಹೆಚ್ಚಳವನ್ನು ಶೇ 119 ರಿಂದ ಶೇ 125ಕ್ಕೆ ಏರಿಸಲಾಗುವುದು ಎಂಬ ಸುದ್ದಿ ಬಂದಿದೆ. ಕೈಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ (CPI-IW data) ಆಧಾರದಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.
ಜನವರಿ-ಡಿಸೆಂಬರ್ 2015 ರತನಕ ಸೂಚ್ಯಂಕ ಶೇ6.73ರಷ್ಟಿತ್ತು. ಹೀಗಾಗಿ ಶೇ 6 ಅಂಕಗಳಿಂದ 125% ತನಕ ಏರಿಕೆ ನಿರೀಕ್ಷಿಸಬಹುದು ಎಂದು ಕೇಂದ್ರ ಸರ್ಕಾರಿ ನೌಕರರು ಹಾಗೂ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಕೆಕೆಎನ್ ಕುಟ್ಟಿ ಹೇಳಿದ್ದಾರೆ.
ಆದರೆ, ಬೆಲೆ ಏರಿಕೆ ಹೆಚ್ಚುತ್ತಲೆ ಇದೆ. ಹಣದುಬ್ಬರ ದರ ಶೇ 220-240ರಷ್ಟಿದೆ ಆದರೆ, ನಮಗೆ ಶೇ125ರಷ್ಟು ಕೈಗುಟುಕಿದೆ ಎಂದು ಕುಟ್ಟಿ ಅವರು ಡಿಎ ಹೆಚ್ಚಳದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪರಿಷ್ಕೃತ dearness allowance(ಡಿಎ) ದರಗಳು ಜನವರಿ 01, 2016ರಿಂದ ಜಾರಿಗೆ ಬರಲಿದ್ದು 48 ಲಕ್ಷ ಉದ್ಯೋಗಿಗಳು ಹಾಗೂ 55 ಲಕ್ಷ ಪಿಂಚಣಿದಾರರಿಗೆ ಉಪಯೋಗವಾಗಲಿದೆ. ಕಳೆದ ಸೆಪ್ಟೆಂಬರ್ 2015ರಲ್ಲಿ ಡಿಎ ದರವನ್ನು ಶೇ 113ರಿಂದ ಶೇ 119ಕ್ಕೆ (ಜುಲೈ 1, 2015ರಿಂದ ಅನ್ವಯವಾಗುವಂತೆ) ಹೆಚ್ಚಿಸಲಾಗಿತ್ತು.
ತುಟ್ಟಿ ಭತ್ಯೆ (dearness allowance): ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ. ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.
ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ
