ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಕನ್ನಡದ ಚಿತ್ರಕ್ಕೆ ಮುಗಿಬಿದ್ದ ಸಲ್ಲುಮಿಯಾ!

ಈಗ ಈ ಸಿನೆಮಾದ ಕುರಿತು ಮತ್ತೊಂದು ವಿಶೇಷ ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಾಲಿವುಡ್ ಬಿಗ್ ಸ್ಟಾರ್ ಸಲ್ಮಾನ್ ಖಾನ್ ವೀಕ್ಷಿಸಿದ್ದಾರಂತೆ. ಟ್ರೇಲರ್ ಮತ್ತು ಸಾಂಗ್‌ಗಳನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿರುವ ಸಲ್ಮಾನ್, ಚಿತ್ರದ ನಿರ್ಮಾಪಕ ರವಿ ಕಷ್ಯಪ್ ಅವರ ಬಳಿ ಆದಷ್ಟು ಬೇಗ ಇಡೀ ಚಿತ್ರವನ್ನು ನೋಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಕುರಿತು ಮಾತುಕತೆ ಸಹಾ ನಡೆದಿದೆ.

ಸಲ್ಮಾನ್‌ಖಾನ್ ಬದ್ಮಾಶ್ ಸಿನಿಮಾವನ್ನು ಇಷ್ಟರಮಟ್ಟಿಗೆ ಮೆಚ್ಚಿಕೊಳ್ಳುತ್ತಾರೆಂದರೆ, ಸಿನೆಮಾದಲ್ಲಿ ಏನೋ ಒಂದು ವಿಶೇಷವಾದ ಕಂಟೆಂಟ್ ಇರೋದಂತೂ ನಿಜ ಅಂತಿದೆ ಗಾಂಧಿನಗರ. ಈ ಚಿತ್ರದಲ್ಲಿ ನಾಯಕನಟ ಧನಂಜಯ ಬರೋಬ್ಬರಿ ಹತ್ತು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮಾರ್ಚ್ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುವ ತಯಾರಿಯಲ್ಲಿದೆ.

ರವಿ ಕಶ್ಯಪ್ ನಿರ್ಮಾಣದಲ್ಲಿ, ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರ ಒಂದು ವೇಳೆ ಹಿಂದಿಯಲ್ಲಿ ಮರುನಿರ್ಮಾಣಗೊಳ್ಳುವುದು ಗ್ಯಾರೆಂಟಿಯಾದಲ್ಲಿ ಅದನ್ನು ಇದೇ ತಂಡ ನಿಭಾಯಿಸುತ್ತದಾ? ಅಥವಾ ಬೇರೊಬ್ಬರ ನಿರ್ಮಾಣ, ನಿರ್ದೇಶನದಲ್ಲಿ ತಯಾರಾಗುತ್ತದಾ ಎನ್ನುವುದು ಸದ್ಯಕ್ಕೆ ತಿಳಿಯುತ್ತಿಲ್ಲ. ಕನ್ನಡ ಚಿತ್ರವೊಂದರ ಈ ಸಾಧನೆ ಕಮ್ಮಿಯೇನಲ್ಲ ಅನ್ನೋದೂ ಅಷ್ಟೇ ಸತ್ಯ.