ದೊಡ್ಡ ಸುದ್ದಿ

ವಿವಿಯಲ್ಲಿ ಕಡ್ಡಾಯ ರಾಷ್ಟ್ರಧ್ವಜ: 45 ಲಕ್ಷ ವೆಚ್ಚ

ದಿಲ್ಲಿಯ ಜೆಎನ್‌ಯು ವಿವಾದದ ನಂತರ ಮಾನವ ಸಂಪನ್ಮೂಲ ಸಚಿವಾಲಯು ಎಲ್ಲ ಕೇಂದ್ರೀಯ ವಿವಿಗಳಲ್ಲಿ 200 ಅಡಿಗೂ ಎತ್ತರ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತಂದಿದೆ. ರಾಷ್ಟ್ರಿಯತೆ ಬೆಲೆ ಕಟ್ಟಲಾಗದ ಸ್ವತ್ತು ನಿಜ. ಆದರೆ ಈ ನಿಯಮವು ಭಾರಿ ವೆಚ್ಚವನ್ನು ಬೇಡುತ್ತಿದೆ.

200 ಅಡಿ ಅಥವಾ ಅದಕ್ಕಿಂತ ಎತ್ತರದ ಧ್ವಜಸ್ತಂಭವನ್ನು ನಿರ್ಮಿಸಲು ಪ್ರತಿ ವಿಶ್ವವಿದ್ಯಾಲಯಕ್ಕೂ 40 ರಿಂದ 45ಲಕ್ಷ ರೂ.  ವೆಚ್ಚವಾಗಲಿದೆ. ಅಲ್ಲದೆ ಈ ಧ್ವಜದ ನಿರ್ವಹಣೆಗೆ ತಿಂಗಳಿಗೆ 65 ಸಾವಿರ ರೂ.ಗೂ ಅಧಿಕ ಖರ್ಚು ಬರಲಿದೆ ಎಂದು ‘ಫ್ಲ್ಯಾಗ್ ಫೌಂಡೇಶನ್ ಆಫ್ ಇಂಡಿಯಾ’ದ ಸಿಇಒ, ನಿವೃತ್ತ ಕಮಾಂಡರ್ ಕೆ.ವಿ. ಸಿಂಗ್ ಎಕಾನಮಿಕ್ ಟೈಮ್ಸ್‌ಗೆ
ತಿಳಿಸಿzರೆ.
“ನಾವು 200 ಅಡಿಗೂ ಎತ್ತರದ ಧ್ವಜ ಸ್ತಂಭಗಳೂ ಸೇರಿದಂತೆ ದೇಶಾದ್ಯಂತ ೬೫ಕ್ಕೂ ಹೆಚ್ಚು ಧ್ವಜಸ್ತಂಭಗಳನ್ನು ನಿರ್ಮಿಸಿದ್ದೇವೆ. ಪುಣೆಯ ಎರಡು ಕಾರ್ಖಾನೆಗಳಲ್ಲಿ ವಿಶೇಷವಾದ ಉಕ್ಕಿನಿಂದ ತಯಾರಾಗುವ ಕಂಬಗಳನ್ನು ಧ್ವಜಸ್ತಂಭಕ್ಕೆ ಬಳಸುತ್ತೇವೆ. ಇವು ಸದೃಢವಾಗಿ ನಿಲ್ಲಲು ಹಾಗೂ ದೊಡ್ಡ ಗಾತ್ರದ ಧ್ವಜಗಳನ್ನು ಹಾರಿಸಲು ಅನು ಕೂಲವಾಗಿರುತ್ತವೆ ಎಂದರು.