ದೊಡ್ಡ ಸುದ್ದಿ ಲೈಫ್ ಸ್ಟೈಲ್

ಲೌಡ್‌ ಮ್ಯೂಸಿಕ್‌ ಮತ್ತು ಸೆಕ್ಸ್‌ ಲೈಫ್‌ಗೆ ಏನು ಕನೆಕ್ಷನ್‌?

ಲೌಡ್‌ ಮ್ಯೂಸಿಕ್ ಅಥವಾ ಜೋರಾಗಿ ಮ್ಯೂಸಿಕ್‌ ಇಟ್ಟು ಸೆಕ್ಸ್‌ ಮಾಡುವುದರಿಂದ ನಿಮಗೆ ಹೆಚ್ಚಿನ ಸುಖ ಸಿಗುತ್ತದೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಈ ಸಂಶೋಧನೆಗಾಗಿ ಆಡಿಯೋ ಹಾರ್ಡ್‌ವೇರ್‌ ಕಂಪನಿ ಸೋನೋಸ್‌  ಮತ್ತು  ಆ್ಯಪಲ್‌ ಮ್ಯೂಸಿಕ್‌ 30,000 ಜನರನ್ನು  ಸಮೀಕ್ಷೆಗೆ ಒಳಪಡಿಸಿತ್ತು. ಅಲ್ಲದೇ ಇದಕ್ಕಾಗಿ ಜಗತ್ತಿನಾದ್ಯಂತದ 109 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು.

ಎರಡು ವಾರಗಳ ತನಕ ನಡೆದ ಈ ಸಂಶೋಧನೆಯಲ್ಲಿ ಮೊದಲನೆ ವಾರದಲ್ಲಿ ಹೆಚ್ಚಿನ ವಾಲ್ಯೂಮ್‌ ಇಲ್ಲದೆ ಮ್ಯೂಸಿಕ್‌ ಇಟ್ಟು ಸೆಕ್ಸ್‌ ಮಾಡುವಂತೆ ತಿಳಿಸಲಾಗಿತ್ತು. ಎರಡನೇ ವಾರದಲ್ಲಿ ಸೋನೋಸ್‌ ಸಿಸ್ಟಮ್‌ ಮತ್ತು ಆ್ಯಪಲ್‌ ಮ್ಯೂಸಿಕ್‌ ಜೋರಾಗಿ ವಾಲ್ಯೂಮ್‌ ಇಟ್ಟು ಜನರಿಗೆ ಹಾಡು ಕೇಳುವಂತೆ ಮಾಡಿದರು.ಈ ಸಂಶೋಧನೆಯ ಹಿನ್ನೆಲೆಯಲ್ಲಿ 1 ವಾರದಲ್ಲಿ ಸುಮಾರು 8,124 ಹಾಡುಗಳನ್ನು ಕೇಳಿಸಲಾಯಿತು. ಸಂಗೀತ ಕೇಳಿದ ನಂತರ 67 ಶೇಕಡಕ್ಕೂ ಹೆಚ್ಚಿನ ಜನ ಅಧಿಕ ಸೆಕ್ಸ್‌ ಸುಖ ಅನುಭವಿಸಿದರು ಎಂಬುದು ತಿಳಿದು ಬಂದಿದೆ.

ಇದು ಮಾತ್ರವಲ್ಲದೆ ಸಂಗೀತವೆಂಬುದು ಕೆಲವು ಪ್ರದೇಶದ ಜನರಿಗೆ ಉಸಿರಾಟ ಅಥವಾ ನಡೆದಾಡುವಷ್ಟೇ ಪ್ರಾಮುಖ್ಯತೆ ಹೊಂದಿದೆ ಎಂದು ಸಹ ತಿಳಿದು ಬಂದಿದೆ. ಸಂಗೀತ ಕೇಳುವುದರಿಂದ ನ್ಯೂರೋಟ್ರಾನ್ಸ್‌ಮೀಟರ್‌ ಆಕ್ಸಿಟೋನ್‌ ಎಂಬ ಲವ್‌ ಹಾರ್ಮೋನ್‌ ಸಹ ಬಿಡುಗಡೆಯಾಗುತ್ತದೆ.