ದೊಡ್ಡ ಸುದ್ದಿ ಹೊಸ ಸುದ್ದಿ

ಬಫರಿಂಗ್‌ ಸಮಸ್ಯೆಯಿಲ್ಲದೆ ಯೂಟ್ಯೂಬ್‌ ವಿಡಿಯೋ ನೋಡಿ

ಮೊದಲಿಗೆ ನೀವು ನಿಮ್ಮ ಗೂಗಲ್‌ ಕ್ರೋಮ ಅಥವಾ ಮೊಜಿಲ್ಲಾ ಫೈಯರ್‌ಫಾಕ್ಸ್‌ಗೆ “SmartVideo for YouTube” ವಿಸ್ತರಣೆಯನ್ನು ಡೌನ್‌ಲೊಡ್‌ ಮಾಡಿ ಇನ್‌ಸ್ಟಾಲ್‌ ಮಾಡಿ. ಅದನ್ನು ಕ್ಲಿಕ್‌ ಮಾಡಿದಾಗ ವೆಬ್‌ ಪೇಜ್‌ ಓಪನ್ ಆಗುತ್ತದೆ. ವೆಬ್‌ಪೇಜ್‌ನಲ್ಲಿ ಹಸಿರು ಬಟನ್‌ನಲ್ಲಿ ಕಾಣುವ ADDED TO CHROME ಎಂಬಲ್ಲಿ ಕ್ಲಿಕ್‌ ಮಾಡಿ.

“SmartVideo for YouTube” ಇನ್‌ಸ್ಟಾಲ್‌ ಮಾಡಿದ ನಂತರ ಯೂಟ್ಯೂಬ್‌ನಲ್ಲಿ ಯಾವುದಾದರೂ ಒಂದು ವೀಡಿಯೋವನ್ನು ಪ್ಲೇ ಮಾಡಿ. ವೀಡಿಯೋ ಪ್ಲೇ ಮಾಡಿದ ನಂತರ ವೀಡಿಯೋ ಕೆಳಗೆ ಕೆಲವು ಹೊಸ ಆಯ್ಕೆಗಳು ಕಾಣುತ್ತದೆ. ಮೌಸ್‌ ಅನ್ನು ನಿಮ್ಮ ಯೂಟ್ಯೂಬ್‌ ವೀಡಿಯೋ ಮೇಲಿಂದ ಕೆಳಗೆ ಇಳಿಸಿದಾಗ ಆಯ್ಕೆಗಳ ಬಾಕ್ಸ್‌ ಬರುತ್ತದೆ.

ಈ ಹಂತದಲ್ಲಿ ಬಲಭಾಗದಲ್ಲಿ Global Prefereces ಎಂಬಲ್ಲಿ ಕ್ಲಿಕ್ ಮಾಡಿ. ನಂತರ Smart Buffer ಎಂಬ ಆಯ್ಕೆ ಕಾಣುತ್ತದೆ. ಅದನ್ನು ರೈಟ್‌ ಮಾರ್ಕ್‌ ಮಾಡಿ.

ಈಗ ನೀವು ಬಳಸುವ ಯೂಟ್ಯೂಬ್‌ ವೀಡಿಯೋಗಳ ಬಫರ್‌ ಅತಿವೇಗಗೊಳ್ಳುತ್ತದೆ. ಯೂಟ್ಯೂಬ್‌ ಸ್ಟ್ರೀಮಿಂಗ್ ಅತಿವೇಗವಾಗಿ ನೀವು ವೀಡಿಯೋವನ್ನು ಬಫರ್‌ ಇಲ್ಲದಂತೆ ವೇಗವಾಗಿ ನೋಡಬಹುದಾಗಿದೆ.