ಕ್ರೀಡಾ ಸುದ್ದಿ ಸಿನಿಮಾ ಸುದ್ದಿ

ಟಾಪಲೆಸ್‌ ಆದ್ಲು ಶೇನ್ ಮಾಜಿ ಪ್ರೇಯಸಿ: ವಾರ್ನ್‌‌ಗೆ ಶುರುವಾಗಿದೆ ತಳಮಳ!

ಲಂಡನ್: ಈಕೆ ಆಸ್ಟ್ರೆಲೀಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್‌‌ ಅವರ ಮಾಜಿ ಪ್ರೇಯಸಿ ಎಮಿಲಿ ಸ್ಕಾಟ್‌‌. ಈಕೆ ಮಾಡೆಲ್ ಕೂಡ ಹೌದು. ಆದ್ರೆ ಈಕೆಯ ಇತ್ತೀಚಿಗಿನ ಹಾಟ್ ಫೋಟೋ ಶೂಟ್ ನೋಡಿದ ವಾರ್ನ್‌, ಅಯ್ಯೋ ಮಿಸ್ಸಾಯ್ತಲ್ಲ ಅಂತಾ ಬ್ರೇಕ್‌‌ಅಪ್ ಆಗಿದ್ದಕ್ಕೆ ತಲೆ ಚಚ್ಚಿಕೊಳ್ತಿದ್ದಾನಂತೆ.

ತನ್ನ ನೂತನ ಫೋಟೋಶೂಟ್‌‌ಗಾಗಿ ಅರೆ ಬೆತ್ತಲೆ ಪೋಸ್ ನೀಡಿರುವ ಎಮಿಲಿ, ನೋಡಿಲ್ಲಿ ವಾರ್ನ್‌ ನಾನು ಈಗಲೂ ಸೆಕ್ಸಿಯಾಗಿದ್ದೇನೆ ಅಂತಾ ನಗೆ ಬೀರಿದ್ದಾಳೆ. ಶೇನ್ ವಾರ್ನ್‌ ಇದೀಗ ‘I’m A Celebrity…Get Me Out Of Here!’ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದು, ಎಮಿಲಿಯ ಈ ಹಾಟ್ ಫೋಟೋಗಳನ್ನು ನೋಡಿ ‘ಒಮ್ಮೆ ಭೇಟಿಯಾಗಿ ಬಿಡ್ಲಾ’ ಅಂತಾ ಮನಸ್ಸಲ್ಲೇ ಮಾತಾಡಿಕೊಳ್ಳುತ್ತಿದ್ದಾನಂತೆ.

ಇನ್ನೂ ವಿಶೇಷ ಅಂದ್ರೆ ಎಮಿಲಿ ಸ್ಕಾಟ್‌‌ಳನ್ನು ಕೂಡ ಈ ರಿಯಾಲಿಟಿ ಶೋ ಗೆ ಕರೆತರುವ ಪ್ರಸ್ತಾವನೆ ಇದೆಯಂತೆ. 32 ವರ್ಷದ ಎಮಿಲಿ ಸ್ಕಾಟ್ ಒಂದು ವರ್ಷದವರೆಗೆ ಶೇನ್ ವಾರ್ನ್‌ ಜೊತೆ ಮರ ಸುತ್ತಿದ್ದು, ವಾರ್ನ್‌‌ಗಾಗಿ ತನ್ನ ಗಂಡನನ್ನು ತೊರೆದಿದ್ದಳು. ಆದರೆ ಮುಂದೆ ಶೇನ್ ವಾರ್ನ್‌‌ ಜೊತೆಯೂ ಮನಸ್ತಾಪ ಉಂಟಾದ ಪರಿಣಾಮ ಇಬ್ಬರೂ ಬೇರ್ಪಟ್ಟಿದ್ದರು.