ಬಳ್ಳಾರಿ: ಪೊಲೀಸರ ವರ್ಗಾವಣೆಗೆ ಸಂಬಂಧಿಸಿದ ವಿವಾದದಲ್ಲಿ ಸಿಲುಕಿ ಹೈರಾಣಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ್ ಅವರಿಗೆ ಜಿಪಂ-ತಾಪಂ ಚುನಾವಣೆಯಲ್ಲಿ ಮತದಾರರು ಬಿಸಿ ಮುಟ್ಟಿಸಿದ್ದಾರೆ. ಸಚಿವರ ಪುತ್ರ ಭರತ್ ನಾಯ್ಕ ಹರಪನಹಳ್ಳಿ ತಾಲೂಕಿನ
ಜಿ.ಪಂ.ಕ್ಷೇತ್ರದಲ್ಲಿ ಸೋಲು ಕಂಡಿದ್ದು, ಸಚಿವರಿಗೆ ಭಾರಿ ಇರುಸುಮುರುಸು ಉಂಟು ಮಾಡಿದೆ.
ಇಡೀ ಜಿಲ್ಲೆಯಲ್ಲಿ ಕೂಡ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್‌ನವರೇ ಆದ ಶಾಸಕ ಎಂ.ಪಿ. ರವೀಂದ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಅವರ ನಡುವಿನ ವೈಮನಸ್ಯವೂ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ನಾಯ್ಕ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವೇದಿಕೆ ಸಿದಟಛಿಪಡಿಸಿಕೊಳ್ಳುತ್ತಿದ್ದ ಗರಿಬೊಮ್ಮನಹಳ್ಳಿ ತಾಲೂಕಿನ ೪ ಜಿ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಸಚಿವರ ಕನಸಿಗೆ ತಣ್ಣೀರು ಎರಚಿದಂತಾಗಿದೆ.