ದೊಡ್ಡ ಸುದ್ದಿ

ಬಾಯ್‌ಫ್ರೆಂಡ್‌‌‌ಗೆ ಕಳುಹಿಸಬೇಕಾಗಿದ್ದ ಫೋಟೋ ಅಪ್ಪಂಗೆ ಕಳುಹಿಸಿದಾಗ..!

ಮುಂದೆನಾಯ್ತು ಅಂತಾ ಹೇಳೊದ್ರಲ್ಲಿ ಅರ್ಥವಿಲ್ಲ ಬಿಡಿ. ಆದ್ರೆ ಈ ಇಡೀ ಘಟನೆಯೇ ಒಂದು ಪ್ರ್ಯಾಂಕ್ ಅಂದ್ರೆ ನೀವು ನಂಬ್ತಿರಾ?. ಹೌದು, ಸಾಮಾಜಿಕ ಜಾಲ ತಾಣಗಳನ್ನು ಉಪಯೊಗಿಸುವ ಇಂದಿನ ಯುವ ಪೀಳಿಗೆ, ಅದ್ರಲ್ಲೂ ವಿಶೇಷವಾಗಿ ಯುವತಿಯರು ಯಾವ ರೀತಿ ಮೋಸ ಹೋಗುತ್ತಾರೆ ಎಂಬುದರ ಕುರಿತು ಅರಿವು ಮೂಡಿಸಲು ‘ಪುರಾನಿ ದಿಲ್ಲಿ ಟಾಕೀಸ್’ (ಪಿಡಿಟಿ) ಈ ವಿಡಿಯೋ ಬಿಡುಗಡೆಗೊಳಿಸಿದೆ.

ಸಾಮಾಜಿಕ ಜಾಲ ತಾಣಗಳನ್ನು ಉಪಯೋಗಿಸುವಾಗ ಅತ್ಯಂತ ಜಾಗೂರಕತೆಯಿಂದ ಇರಬೇಕು ಎಂಬ ಸಂದೇಶ ಇದರಲ್ಲಿ ಇದ್ದು, ಸಾಮಾಜಿಕ ಜಾಲ ತಾಣಗಳ ದುರುಪಯೋಗ ಯಾವ ರೀತಿಯ ದುಷ್ಪರಿಣಾಮ ಬೀರಬಲ್ಲದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗಿದೆ.