“ಹೂ ಡಿಲಿಟೇಡ್ ಮಿ” ಎನ್ನುವ ಹೊಸ ಆ್ಯಪ್ನಿಂದ ಫೇಸ್ಬುಕ್ ಖಾತೆ ಹೊಂದಿರುವವರು ಯಾರು ನಿಮ್ಮನ್ನು ಅನ್ಫ್ರೆಂಡ್ ಮಾಡಿದ್ದಾರೆ ಎನ್ನವುದನ್ನು ತಿಳಿಯಬಹುದಾಗಿದೆ. ಈ ಆ್ಯಪ್ ನಿಮ್ಮ ಫೇಸ್ಬುಕ್ ಫ್ರೆಂಡ್ಸ್ನ್ನು ಟ್ರಾಕ್ ಮಾಡುತ್ತದೆ. ನಿಮ್ಮ ಫ್ರೆಂಡ್ ಲಿಸ್ಟ್ನಲ್ಲಿದ್ದ ಯಾರೊಬ್ಬರಾದರೂ ನಿಮ್ಮ ಫ್ರೆಂಡ್ ಲಿಸ್ಟ್ನಿಂದ ಮಿಸ್ ಆದರೆ ಅದು ನಿಮಗೆ ನೋಟಿಫೀಕೇಶನ್ ಕಳಿಸುತ್ತದೆ.
ನೀವು ಹೊಸ ಫೇಸ್ಬುಕ್ ಫ್ರೆಂಡ್ಸ್ನ್ನು ಮಾಡಿಕೊಂಡಾಗ ನಿಮಗೆ ನೋಟಿಫೀಕೇಶನ್ ನೀಡುತ್ತದೆ. ನೀವು ಯಾವಾಗ ಲಾಗಿನ್ ಮಾಡಿದ್ರಿ, ಪ್ರಸ್ತುತ ನಿಮ್ಮ ಫೇಸ್ಬುಕ್ನಲ್ಲಿರುವ ಫ್ರೆಂಡ್ಸ್ಗಳೆಷ್ಟು ಎನ್ನುವುದನ್ನು ಈ ಆ್ಯಪ್ ಸೇವ್ ಮಾಡಿರುತ್ತದೆ. ನೀವು ನೆಕ್ಸ್ಟ್ ಲಾಗಿನ್ ಮಾಡಿದಾಗ ಅದರಲ್ಲಾದ ಬದಲಾವಣೆಯನ್ನು ಈ ಹಿಂದೆ ಸೇವ್ ಮಾಡಿಟ್ಟಿದ್ದಕ್ಕೆ ಹೋಲಿಸುತ್ತದೆ. ನಿಮ್ಮ ಫ್ರೆಂಡ್ ಅವರ ಫೇಸ್ಬುಕ್ ಖಾತೆಯನ್ನು ಮುಚ್ಚಿದರೆ ಕೂಡಾ ಅದು ನಿಮಗೆ ಮಾಹಿತಿಯನ್ನು ನೀಡುತ್ತದೆ.
ಈ ಆ್ಯಪ್ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಫೇಸ್ಬುಕ್ ಬಳಸುವವರಿಗೆ ಮಾತ್ರ ಲಭ್ಯ. ಫೇಸ್ಬುಕ್ ಐ ಫೋನ್ ಹಾಗೂ ಐಪ್ಯಾಡ್ಗಳ ಫೇಸ್ಬುಕ್ ಮೆಸೆಂಜರ್ ಆ್ಯಪ್ನಲ್ಲಿ ಇನ್ನೂ ಯಾವುದೇ ಬದಲಾವಣೆಯನ್ನು ತಂದಿಲ್ಲ. ಮೆಸೆಂಜರ್ ಅಪ್ಲಿಕೇಶನ್ ಒಳಗೆ ಖಾತೆಗಳನ್ನು ಬದಲಾಯಿಸಲು ಸಾಮರ್ಥ್ಯವನ್ನು ಸೇರಿಸಲಾಗಿದೆ. ಪ್ರಸ್ತುತ 800 ಮಿಲಿಯನ್ಗೂ ಅಧಿಕ ಜನರು ಫೇಸ್ಬುಕ್ ಮೇಸೆಂಜರ್ನ್ನು ಬಳಸುತ್ತಿದ್ದಾರೆ.