ವಾಣಿಜ್ಯ ಸುದ್ದಿ

ಸ್ಮಾರ್ಟ್ ಸಿಟಿಗೆ ಬೇಕು ಭಾರಿ ಹೂಡಿಕೆ

ಮುಂಬೈ: ಪ್ರಧಾನಿ ಮೋದಿ ಸರ್ಕಾರದ ಸ್ಮಾರ್ಟ್ ಸಿಟಿಗೆ ಮುಂದಿನ 5 ವರ್ಷಗಳಲ್ಲಿ 150 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಅಗತ್ಯವಿದೆ.ಈ ಬಗ್ಗೆ ಖಾಸಗಿ ಕ್ಷೇತ್ರದಿಂದ 120 ಬಿಲಿಯನ್ ಡಾಲರ್ ನಷ್ಟು ಬರಲಿದೆ ಎಂದು ಡೆಲಾಯ್ಡ್ ನಡೆಸಿದ ಅಧ್ಯಯನದಿಂದ ಗೊತ್ತಾಗಿದೆ.
ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ ಯೋಜನೆಗಳಿಗಾಗಿ 7.51 ಬಿಲಿಯನ್ ಡಾಲರ್ ಮೊತ್ತವನ್ನು ಕೇಂದ್ರ ಮೀಸಲಿರಿಸಿದೆ. ಸ್ಮಾರ್ಟ್ ಸಿಟಿ ಬಹುಕೋಟಿ ವೆಚ್ಚದ ಹೂಡಿಕೆಯೇ ಪ್ರಮುಖ ಅಂಶ. ಅದಕ್ಕೆ ಸಂಬಂಧಿಸಿದ ಯೋಜನೆಗಳ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಡೆಲಾಯ್ಟ್ ಇಂಡಿಯಾದ ಪಿಎನ್ ಸುಂದರೇಶ್ ತಿಳಿಸಿದ್ದಾರೆ.