ಫೆಬ್ರವರಿ ತಿಂಗಳು ಬಂತೆಂದರೆ ನೆನಪಾಗುವುದೇ ವ್ಯಾಲೆಂಟೆನ್ಸ್ ಡೇ.. ಪ್ರೀತಿಯಲ್ಲಿ ಬಿದ್ದಿರೋರು, ಪ್ರೇಮಿಗಳು ಇಡೀ ವರ್ಷದಲ್ಲಿ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಪ್ರೇಮಿಗಳಿಗಾಗಿಯೇ ಮೀಸಲಿಟ್ಟಿರುವ ಈ ದಿನಕ್ಕಾಗಿ ಮೊದಲೇ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ.
ತಮ್ಮ ಈ ದಿನವನ್ನು ತುಂಬಾನೇ ಸ್ಪೆಶಲ್ ಮಾಡೋ ಕುತೂಹಲದಲ್ಲಿರುತ್ತಾರೆ. ಆದ್ರೆ ಕೆಲವು ಜೋಡಿಗಳು ಯಾವ ಪ್ಲ್ಯಾನ್ ಮಾಡೋದು, ಹೇಗೆ ಆಕೆ/ಆತನನ್ನ ಸಂತೋಷ ಪಡಿಸೋದು ಎನ್ನೋ ಕನ್‌ಫ್ಯೂಶನ್‌ನಲ್ಲಿರುತ್ತಾರೆ. ನೀವು ಕೂಡಾ ಆ ಕೆಟಗರಿಯಲ್ಲಿದ್ದರೆ ನಿಮ್ಮ ಈ ಟೆನ್ಷನ್ ದೂರ ಮಾಡಲು ಕೆಲವು ಟಿಪ್ಸ್ ಇಲ್ಲಿದೆ.
ಯಾವಾಗಲು ಕೆಲಸದ ಒತ್ತಡ ಇದ್ದದ್ದೇ. ನಿಮ್ಮ ಕೆಲಸದ ಒತ್ತಡದಿಂದಾಗಿ ನೀವು ನಿಮ್ಮ ಸಂಗಾತಿಗೆ ಸಮಯ ನೀಡದೆ ಇರಬಹುದು. ಆ ಬಗ್ಗೆ ಕಂಪ್ಲೆಂಟ್ ಯಾವಾಗಲೂ ಇದ್ದೇ ಇರುತ್ತೆ. ಹಾಗಾಗಿ ಈ ದಿನ ಮಾತ್ರ ನಿಮ್ಮ ಬಿಡುವಿನ ಕೆಲಸವನ್ನೇಲ್ಲಾ ಬದಿಗಿಟ್ಟು ಕೇವಲ ಸಂಗಾತಿಯೊಂದಿಗೆ ಕಳೆಯಿರಿ. ಸರ್‌ಪ್ರೈಸ್ ರೋಮಾಂಟಿಕ್ ಡಿನ್ನರ್ ಪ್ಲ್ಯಾನ್ ಮಾಡಿ.
ಡಜನ್ ಕೆಂಪು ಗುಲಾಬಿಯನ್ನು ನೀಡಿ. ಗುಲಾಬಿ ಪ್ರೀತಿಯ ಸಂಕೇತ. ಅದರಲ್ಲೂ ಹೆಣ್ಣು ಮಕ್ಕಳಿಗೆ ಕೆಂಪು ಗುಲಾಬಿ ಅಂದ್ರೆ ಅಚ್ಚುಮೆಚ್ಚು. ಅದರಲ್ಲಿ ನೀವು ಹೇಳಬೇಕೆಂದಿರುವ ಮೂರು ಶಬ್ಧವನ್ನು ಬರೆಯಿರಿ.. ಅವರು ಅರ್ಥ ಮಾಡಿಕೊಳ್ಳುತ್ತಾರೆ.
ಸಾಧ್ಯವಾದರೆ ನೀವಿಬ್ಬರು ಮೊದಲ ಬಾರಿ ಹೋದ ರೆಸ್ಟೋರೆಂಟ್‌ನಲ್ಲಿ ಈಗಿನ ಡೇಟಿಂಗ್ ಫೀಕ್ಸ್ ಮಾಡಿ, ಹಳೆ ನೆನಪುಗಳನ್ನು ತಾಜಾ ಮಾಡಿ.
ರೆಡಿಯೋ ಶೋಗೆ ಕಾಲ್ ಮಾಡಿ ಅವರಿಗಾಗಿ ಸಾಂಗನ್ನು ಡೆಡಿಕೇಟ್ ಮಾಡಿ. ಅವರು ಕೆಲಸ ಮಾಡುವ ಆಫೀಸ್‌ಗೆ ಹೂವಿನ ಗುಚ್ಛವನ್ನು ಕಳಿಸಿ. ಒಂದು ದೊಡ್ಡ ಬಾಕ್ಸ್ ತುಂಬಾ ಗಾಳಿ ತುಂಬಿರುವ ಬಲೂನ್‌ನ್ನು ಗಿಫ್ಟ್ ಮಾಡಿ ಸರ್‌ಪ್ರೈಸ್ ಕೊಡಿ.
ಪಬ್ಲಿಕ್‌ನಲ್ಲಿ ನಿಮ್ಮ ಲವ್‌ನ್ನು ಎಕ್ಸ್‌ಪ್ರೆಸ್ ಮಾಡಿ. ಜನರು ಓದುವ ರೀತಿಯಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರೀತಿ ತೋರಿಸಿಕೊಳ್ಳಿ.
ಒಂದು ಜಾರ್ ತುಂಬಾ ಕ್ಯಾಂಡಿ ತುಂಬಿಸಿ ಅದರಲ್ಲಿ ಪ್ರೇಮ ಸಂದೇಶವನ್ನು ಬರೆದು ರಿಬ್ಬನ್‌ನಲ್ಲಿ ಕಟ್ಟಿ ಕ್ಯಾಂಡಿ ಇದ್ದ ಜಾರ್‌ನಲ್ಲಿ ಮಿಕ್ಸ್ ಮಾಡಿ.
ಕೈ ಬರಹದಲ್ಲಿ ಬರೆದ ಲವ್ ಲೆಟರ್‌ನ್ನು ವ್ಯಾಲೆಂಟೆನ್ಸ್ ಡೇ ಗೂ ಮುಂಚಿತವಾಗಿ ಪೋಸ್ಟ್ ಮಾಡಿ. ಅದು ಸರಿಯಾಗಿ ಅದೇ ದಿನ ತಲುಪುವಂತೆ ನೋಡಿಕೊಳ್ಳಿ.
ಒಂದು ವೇಳೆ ನೀವು ಮನೆಯಲ್ಲೇ ರೊಮ್ಯಾಂಟಿಕ್ ಡಿನ್ನರ್‌ನ ಪ್ಲ್ಯಾನ್ ಮಾಡುತ್ತೀದ್ದೀರೆಂದಾದರೆ, ಮ್ಯೂಸಿಕ್ ಹಾಗೂ ಕ್ಯಾಂಡಲ್‌ನ್ನು ಮರೀಯಬೇಡಿ. ವಿಭಿನ್ನ ಗಾತ್ರದ ಎತ್ತರದ ಕ್ಯಾಂಡಲ್ ನಿಮ್ಮ ರೊಮ್ಯಾಂಟಿಕ್ ಡಿನ್ನರ್‌ನ್ನು ಇನ್ನಷ್ಟು ರೊಮ್ಯಾಂಟಿಕ್ ಮಾಡಲಿದೆ. ಡಿನ್ನರ್ ಆದ ಮೇಲೆ ರೊಮ್ಯಾಂಟಿಕ್ ಸಿನಿಮಾ ನೋಡಲು ಮರೆಯದಿರಿ.
ಇದು ಬರೀ ಲವರ್ಸ್‌ಗಳಿಗೆ ಮಾತ್ರವಲ್ಲ. ಮದುವೆಯಾದವರಿಗೂ ಅನ್ವಯಿಸುತ್ತೆ. ಮದುವೆ ಆದ ನಂತರ ಸಂಸಾರದ ಜಂಜಾಟದ ನಡುವೆ ಪತಿ ಪತ್ನಿಯ ನಡುವಿನ ಪ್ರೀತಿ ಎಲ್ಲೋ ಕಳೆದುಹೋದಂತಹ ಅನುಭವ ಆಗುವುದು ಸಹಜ. ಹಾಗಾಗಿ ವ್ಯಾಲೆಂಟೆನ್ಸ್ ಡೇ ಯಂದು ನಿಮ್ಮ ಸಂಗಾತಿಯನ್ನ ನೀವು ಎಷ್ಟು ಪ್ರೀತಿಸುತ್ತಿದ್ದೀರಿ. ಮದುವೆಯಾಗಿ ಹಲವು ವರ್ಷಗಳೇ ಕಳೆದರೂ ಪ್ರೀತಿ ಇನ್ನೂ ಹಾಗೆ ಇದೆ ಎನ್ನುವ ಫೀಲ್‌ನ್ನು ಮಾಡಿಸಿ.