ಆತ ಪುಟ್ಟ ಗ್ಯಾರೇಜ್ನಲ್ಲಿ ಇಡೀ ದಿನ ದುಡಿದರೆ ಮಾತ್ರ ಆತನ ಕುಟುಂಬದ ಬದುಕು ಸರಾಗವಾಗಿ ಸಾಗುತ್ತದೆ. ಎಲ್ಲೋ ಒಂದು ದಿನ ರಜಾ ಹಾಕಿದ್ರೂ ಬದುಕು ತೀರಾ ಕಷ್ಟದ ಹಾದಿಯಲ್ಲಿ ಕುಂಟೆ ಬಿಲ್ಲೆ ಹಾಡುತ್ತಾ ಸಾಗುತ್ತದೆ. ಇದೇ ಬಡತನದ ಮೂಸೆಯಲ್ಲಿ ಬೆಳೆದ ಹುಡುಗ ಈಗ ಕೋಟಿ ಸ್ಯಾಲರಿ ಪಡೆಯುವ ತಾಕತ್ತು ಬೆಳೆಸಿಕೊಂಡಿದ್ದಾನೆ.
ಬಿಹಾರದ ಹುಡುಗ ವಸ್ತ್ಯಾಲಾ ಸಿಂಗ್ ಚೌಹಾನ್ ಈಗ ಕರಗಪುರ್ ಐಐಟಿಯಲ್ಲಿ ಅಂತಿಮ ಪದವಿ ಮುಗಿಸುತ್ತಿದ್ದಾನೆ. ಆದರೆ ಆತನ ಅದೃಷ್ಟ ಎಂದರೆ ಖ್ಯಾತ ಐಟಿ ಕಂಪನಿ ಮೈಕ್ರೋಸಾಫ್ಟ್ನ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ. ಆತನ ವೇತನ ಎಷ್ಟು ಗೊತ್ತಾ ಬರೋಬರಿ ೧.೨ ಕೋಟಿ ರೂಪಾಯಿ ಎಂದರೆ ಅದು ಆಶ್ಚರ್ಯ ಪಡೆಯುವಂತಹ ಮಾತು. ಈತ ಹಿಂದಿ ಮಾಧ್ಯಮದಲ್ಲಿ ಕಲಿತು ದೊಡ್ಡ ಐಟಿ ಕಂಪನಿಗೆ ಎಂಟ್ರಿ ಪಡೆಯವ ವಿಚಾರ ಕೂಡ ಎಲ್ಲರ ಗಮನ ಸೆಳೆದಿದೆ.
ಈಗಾಗಲೇ ೩.೫೦ ಲಕ್ಷ ಸಾಲದಲ್ಲಿ ತನ್ನ ಶಿಕ್ಷಣ ಪೂರೈಸುತ್ತಿರುವ ವಸ್ತ್ಯಾಲಾ ಇನ್ನೂ ಕೆಲವೇ ತಿಂಗಳಲ್ಲಿ ಮೈಕ್ರೋ ಸಾಫ್ಟ್ ಕಂಪನಿಗೆ ಸೇರಿ ಬಿಡುತ್ತಾನೆ. ಅಂದಹಾಗೆ ಕನ್ನಡ ಭಾಷೆಯಲ್ಲಿ ಕಲಿಯುವ ಅದೆಷ್ಟೋ ಮಂದಿಗೆ ಇಂತಹ ಅವಕಾಶ ಕೂಡ ಮುಂದಿನ ದಿನಗಳಲ್ಲಿ ಸಿಗಬಹುದು ತಾನೇ..? ಆದರೆ ಪ್ರಯತ್ನವನ್ನು ಕೈ ಬಿಡುವ ಕೆಲಸವಂತೂ ವಿದ್ಯಾರ್ಥಿಗಳು ಮಾಡಲೇಬಾರದು.