ದೊಡ್ಡ ಸುದ್ದಿ ಹೊಸ ಸುದ್ದಿ

ನಿಮ್ಮ ಟ್ವಿಟ್ಟರ್ ಖಾತೆ ಕೂಡ ಮುಗಿದು ಹೋಯಿತು !

ಥಟ್.. ಅಂತಾ ನಿಮ್ಮ ಟ್ಟಿಟ್ಟರ್ ಖಾತೆ ಚೆಕ್ ಮಾಡಿಕೊಳ್ಳಿ. ಬೀಕಾಸ್ ೨೦೧೫ರಲ್ಲಿ ಕ್ರಿಯೇಟ್ ಮಾಡಿದ ಬರೋಬರಿ ೧೨೫,೦೦ ಟ್ವಿಟ್ಟರ್ ಖಾತೆಗಳನ್ನು ಟ್ವಿಟ್ವರ್ ಕಂಪನಿ ಸ್ಥಗಿತ ಮಾಡಿದೆ. ಸರಿಸುಮಾರು ೫೦೦ ಮಿಲಿಯದಷ್ಟು ಟ್ವಿಟ್ಟರ್ ಖಾತೆ ಇರುವ ಮಂದಿ ಒಂದ್ ಸಲ ನಿಮ್ಮ ಅಕೌಂಟ್ ಸೇಫ್ ಆಗಿದೆಯ್ಯಾ ಅಂತಾ ಚೆಕ್ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

ಅಂದಹಾಗೆ ಇಂತಹ ಕಾರ್ಯಾಚರಣೆ ಯಾಕೆ ನಡೆಯಿತು ಅಂತಾ ಕೇಳ್ತೀರಾ.. ವಿಶ್ವದಲ್ಲಿರುವ ಉಗ್ರಗಾಮಿಗಳನ್ನು ಬೂಸ್ಟ್ ಮಾಡುವ ವಿಚಾರಗಳನ್ನು ಈ ಖಾತೆಯಲ್ಲಿ ನೀಡಲಾಗುತ್ತಿತ್ತು. ಈ ಕಾರಣದಿಂದ ಅಮೆರಿಕದಲ್ಲಿ ಈ ಕಂಪನಿ ಇಂತಹ ಖಾತೆಯ ಮೂಲಕ ಉಗ್ರಗಾಮಿ ವಿಚಾರಗಳನ್ನು ಹರಡುವುದನ್ನು ನಿಲ್ಲಿಸಲು ಈ ಕಾರ್ಯ ಕೈಗೊಂಡಿದೆ.