ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದೀರಾ ಇನ್ನೂ ಮುಂದೆ ಕೊಂಚ ಕಷ್ಟವಾಗಬಹುದು. ರೈಲಿನಲ್ಲಿ ಸಿಗುತ್ತಿದ್ದ ಎಲ್ಲ ಡಿಸ್ಕೌಂಟ್ಗಳಿಗೆ ಇನ್ನೂ ಮುಂದೆ ಕತ್ತರಿ ಬೀಳುವ ಸಾಧ್ಯತೆಯನ್ನು ಈ ವರ್ಷದ ರೈಲ್ವೆ ಬಜೆಟ್ ಮುಂದೆ ಇಟ್ಟಿದೆ.
ಇದರ ಪ್ರಕಾರ ರೈಲಿನ ಎಸಿ ಫಸ್ಟ್ ಕ್ಲಾಸ್ನಲ್ಲಿ ಓಡಾಡುತ್ತಿರುವವರ ಎಲ್ಲ ಸವಲತ್ತುಗಳನ್ನು ಅಂದರೆ ರಿಯಾಯಿತಿ ವಿಚಾರಗಳಿಗೆ ಕತ್ತರಿ ಹಾಕುವ ಸಿದ್ಧತೆಯೊಂದು ರೈಲ್ವೆ ಬಜೆಟ್ನಲ್ಲಿ ನಡೆಯುತ್ತಿದೆ.
ಫೆಬ್ರವರಿ ೨೫ರಂದು ಬರಲಿರುವ ರೈಲ್ವೆ ಬಜೆಟ್ನಲ್ಲಿ ಈ ವಿಚಾರ ಮುಖ್ಯವಾಗಿ ಪ್ರಸ್ತಾಪವಾಗುವ ಚಾನ್ಸ್ ಇದೆ. ಈಗಾಗಲೇ ಎಸಿ ಫಸ್ಟ್ ಕ್ಲಾಸ್ನಲ್ಲಿ ಭರ್ತಿ ೫೩ ಕೆಟಗರಿಯ ಮೂಲಕ ರಿಯಾಯಿತಿ ಪಡೆಯಲಾಗುತ್ತಿತ್ತು. ಈ ಮೂಲಕ ಸರಿಸುಮಾರು ೧೪೦೦ ಕೋಟಿ ರೂಪಾಯಿ ರೈಲ್ವೆ ಇಲಾಖೆಗೆ ನಷ್ಟವಾಗುತ್ತಿದೆ. ಇದನ್ನೆಲ್ಲ ತಪ್ಪಿಸಲು ರೈಲ್ವೆ ಇಲಾಖೆ ಚಿಂತನೆ ಮಾಡಿದೆ ಎನ್ನುವ ಮಾತಿದೆ.