ದೊಡ್ಡ ಸುದ್ದಿ ಸಿನಿಮಾ ಸುದ್ದಿ

ಕನ್ನಡಕ್ಕೆ ಬರ‍್ತಾಳೆ ಐಶ್ಚರ್ಯಾದ ಹುಡುಗಿ

ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮತ್ತೆ ಎಂಟ್ರಿ ಕೊಡ್ತಾರೆ. ಹೌದು. ಸುದೀಪ್ ಹಾಗೂ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ‘ ಕಲಿ’ ಯಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಜಾಸ್ತಿ ಪ್ರಮಾಣದಲ್ಲಿದೆ.

ಅಂದಹಾಗೆ ದೀಪಿಕಾ ಪಡುಕೋಣೆ ಕನ್ನಡದ ಐಶ್ವರ್ಯಾ ಚಿತ್ರದಲ್ಲಿ ಬಣ್ಣ ಹಾಕಿದ್ದರು. ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು. ಉಪೇಂದ್ರ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಕನ್ನಡಕ್ಕೆ ಕರೆ ತರುವ ಕೆಲಸ ನಡೆಯುತ್ತಿದೆ. ಅಂದಹಾಗೆ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಹಾಗೂ ಸಮಂತಾ ಹೆಸರು ಕೂಡ ಈ ಚಿತ್ರಕ್ಕೆ ಈ ಹಿಂದೆ ಕಾಣಿಸಿಕೊಂಡಿತ್ತು.