ದೊಡ್ಡ ಸುದ್ದಿ ಸಿನಿಮಾ ಸುದ್ದಿ

ತುಳುವರು ಕುಡ್ಲ ಕೆಫೆ ಸಿನಿಮಾ ಯಾಕೆ ನೋಡ್‌ಬೇಕು ಗೊತ್ತಾ?

ತುಳುವಿನಲ್ಲಿ ಹೊಸ ಚಿತ್ರಕ್ಕೇನೂ ಬರವಿಲ್ಲ. ತಿಂಗಳಿಗೆ ಒಂದ್ ಸಿನಿಮಾದಂತೆ ಥಿಯೇಟರ್‌ಗೆ ಬರುವ ತುಳು ಚಿತ್ರಗಳು ಯಾವುದು ಕೂಡ ನೋಡಲು ಆರ್ಹವಾಗಿಲ್ಲ ಎನ್ನುವ ರಿಪೋರ್ಟ್ ಕಾರ್ಡ್‌ಗಳು ಪ್ರೇಕ್ಷಕರಿಂದ ಕೇಳಿಸಿಕೊಳ್ಳುತ್ತಿದೆ.

ಅಂದಹಾಗೆ ತುಳುವಿನಲ್ಲಿ ಹೊಸ ಚಿತ್ರವೊಂದು ತೆರೆಗೆ ಬರುತ್ತಿದೆ. ಅದು ‘ಕುಡ್ಲ ಕೆಫೆ’ ಕೆಲವು ವರ್ಷಗಳ ಹಿಂದೆ ‘ಆಮೇಟ್ ಅಸಲ್ ಈಮೇಟ್ ಕುಸಲ್’ ಎನ್ನುವ ಚಿತ್ರದ ಮೂಲಕ ತುಳುವಿಗೆ ಬಂದ ಬಿಟ-ಟೌನ್ ಹುಡುಗರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಹಾಡುಗಳು ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ಕುಣಿದಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಕಬ್ಬಡ್ಡಿ ಪಂದ್ಯಾಟದ ಕತೆಯೊಂದು ಈ ಚಿತ್ರದಲ್ಲಿ ಜೀವ ಪಡೆದುಕೊಳ್ಳುತ್ತಿದೆ. ಕುಡ್ಲ ಕೆಫೆ ಚಿತ್ರ ಯಾಕೆ ನೋಡಬೇಕು ಅಂತಾ ಪ್ರಶ್ನೆ ಕೇಳುವ ಮಂದಿ ಫೆ.೧೨ರಂದು ಥಿಯೇಟರ್‌ಗೆ ಬನ್ನಿ. ನಿಮಗೆ ಅರಿವಿಗೆ ಬರುತ್ತದೆ.