ಭೋಪಾಲ್: ದಿನ ನಿತ್ಯನೂ ಆತ್ಯಾಚಾರದ ಪ್ರಕರಣ ಸುದ್ದಿಗಳಿಂದ ನಾಗರಿಕ ಸಮಾಜ ತಲ್ಲಣಗೊಳ್ಳುತ್ತಿದ್ದಂತೆ ಇಲ್ಲೊಂದು ಅಪರೂಪದ ಘಟನೆಯಿಂದ ನಾಗರಿಕ ಸಮಾಜ ತಲೆ ಎತ್ತುವ ಕೆಲಸ ನಡೆದಿದೆ.
ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯಲ್ಲಿ ೩೨ ಹರೆಯ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರ ಮಾಡಲು ಬಂದ ಭಾವ ‘ಅದನ್ನೇ’ ಕತ್ತರಿಸುವ ಮೂಲಕ ಅದನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸುವ ಕೆಲಸ ಮಾಡುವ ಮೂಲಕ ಸಖತ್ ಸುದ್ದಿಯಾಗಿದ್ದಾಳೆ.
ಮೂರು ಮಕ್ಕಳ ತಾಯಿಯಾಗಿರುವ ಈ ಮಹಿಳೆ ಅತ್ಯಾಚಾರ ಮಾಡುವಾಗ ಪ್ರತಿರೋಧ ಮಾಡುತ್ತಾ ಕೇಳದೇ ಹೋದಾಗ ಭಾವನ ‘ಅದನ್ನು ಕತ್ತರಿಸಿ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಈ ಸುದ್ದಿ ಇಡೀ ಹಳ್ಳಿಯಲ್ಲಿ ಜೋರಾಗಿ ಕೇಳುತ್ತಿದ್ದಂತೆ ಭಾವ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು ಹೊಡೆದಿದ್ದಾನೆ.