ಅರೇ.. ಕೈ, ಕಾಲು ಗಟ್ಟಿಯಾಗಿದ್ದರೂ ಕೂಡ ತಿಂಗಳಿಗೆ 3೦ ಸಾವಿರ ರೂಪಾಯಿ ದುಡಿಯಲು ಸಾಧ್ಯವಿಲ್ಲ. ಆದರೆ ಬಿಹಾರದ ಭಿಕ್ಷಕರೊಬ್ಬರು ಬರೋಬರಿ ತಿಂಗಳಿಗೆ ೩೦ ಸಾವಿರ ರೂಪಾಯಿ ತಮ್ಮ ಕೀಸೆಗೆ ತುಂಬಿಸಿಕೊಳ್ಳುತ್ತಿದ್ದಾರೆ. ಅದು ಯಾವುದೇ ರೀತಿಯ ಮೋಸ ಕಾರ್ಯಗಳಿಂದ ಅಲ್ಲ ಸರ್.. ತಮ್ಮ ಪ್ರತಿಭೆ ಹಾಗೂ ದೇಸಿ ಟೆಕ್ ಅನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದಾರೆ.
ಬಿಹಾರದ ಗಯಾ ಜಿಲ್ಲೆಯ ೨೫ರ ಹರೆಯದ ಸಿದ್ದಾನಾಥ್ ಅವರು ಅಂಗವಿಕಲರು. ಪೊಲಿಯೋ ಕಾಯಿಲೆಯಿಂದ ತಮ್ಮ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿದ್ದರು. ಇವರನ್ನು ಬಿಹಾರ ಸರಕಾರ ಅಂಗವಿಕಲರ ಪಿಂಚಣಿ ವ್ಯವಸ್ಥೆಯಲ್ಲಿ 6೦೦ ರೂಪಾಯಿಯನ್ನು ಪ್ರತಿ ತಿಂಗಳಿಗೆ ನೀಡುತ್ತಾ ಬಂದಿತ್ತು. ಆದರೆ ಸಿದ್ದಾನಾಥ್ ಏನೂ ಓದಿಲ್ಲದ ಮನುಷ್ಯ. ಆದರೆ ಪ್ರತಿಭಾವಂತ 6೦೦ ರೂಪಾಯಿಯಿಂದ ತಮಗೆ ಏನೂ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಒಂದು ಬಾಡಿಗೆ ರಿಕ್ಷಾ ತೆಗೆದುಕೊಂಡು ಊರೂರು ಭಿಕ್ಷೆ ಎತ್ತುತ್ತಾ ದಿನಕ್ಕೆ 1೦೦೦ ರೂಪಾಯಿ ಕೀಸೆಗೆ ಹಾಕುತ್ತಾರೆ. ದಿನಕ್ಕೆ 2೦೦ ರೂಪಾಯಿ ರಿಕ್ಷಾಕ್ಕೆ ಬಾಡಿಗೆ ಕೊಡಲು ಇರುತ್ತದೆ.
ಯಾವಾಗ 12೦೦ ರೂಪಾಯಿ ಸಂಪಾದನೆಯಾಗುತ್ತದೆಯೋ ಅಲ್ಲಿ ಆ ದಿನ ತಮ್ಮ ಭಿಕ್ಷೆ ಎತ್ತುವ ಕಾಯಕ ಮುಗಿಸಿ ಮನೆಗೆ ಮರಳುತ್ತಾರೆ. ರಿಕ್ಷಾದಲ್ಲಿ ಮೈಕ್ ಕಟ್ಟಿಕೊಂಡು ಭಿಕ್ಷೆ ಬೇಡುವ ಸಿದ್ದಾನಾಥ್ ಅವರ ಪ್ರಯೋಗ ತುಂಬಾನೇ ಮಜಾ ಕೊಡುತ್ತಾ ಇದೆ ಎನ್ನುವುದು ಬಿಹಾರಿಗಳ ಮಾತು.