42 ವರ್ಷದ ನ್ಗುಯೇನ್ ಟುವಾನ್ ಹಂಗ್ ಎನ್ನೋ ಮಹಿಳೆ 2012 ರಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣೆ ಆರೋಪದಡಿ ಬಂಧಿತಳಾಗಿದ್ದಳು. ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆಕೆಗೆ 2014 ರಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆದರೆ ಮರಣದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಆ ಮಹಿಳೆ ಮೇಲ್ಮನವಿ ಅರ್ಜಿ ಸಲ್ಲಿಸಿದಳು. ಅರ್ಜಿಯಲ್ಲಿ ಆಕೆ ತಾನು ಗರ್ಭಿಣಿ ಎಂದು ಮಾಹಿತಿ ನೀಡಿದ್ದಳು.
ಗರ್ಭಿಣಿ ಎಂಬುದನ್ನು ಸಾಬೀತು ಪಡಿಸಲು ಜೈಲಿನಲ್ಲಿದ್ದ ಪುರುಷ ಖೈದಿಯೊಬ್ಬನಿಗೆ ಸುಮಾರು 50 ಮಿಲಿಯನ್ ಹಣ ನೀಡಿ ವೀರ್ಯ ಖರೀದಿಸಿದಳು, ಹೊರಗಡೆಯಿಂದ ಸಿರಿಂಜ್ ತರಿಸಿ ಗರ್ಭ ಧರಿಸಿದಳು. ಇನ್ನೆರಡು ತಿಂಗಳಲ್ಲಿ ಆಕೆ ಮಗುವಿಗೆ ಜನ್ಮ ನೀಡಲಿದ್ದಾಳೆ. ಗರ್ಭಿಣಿ ಆಗಿರುವುದರಿಂದ ಆಕೆಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆ ರದ್ದಾಗಿ ಜೀವಾವಧಿ ಶಿಕ್ಷೆಯಾಗಿ ಮಾರ್ಪಟ್ಟಿದೆ.