ದಾವಣಗೆರೆ: ನಗರದ ಕೆಎಸ್ಐಸಿ ಶೋ ರೂಂನಲ್ಲಿ ಸಿಎಂ ಸಿದ್ದರಾಮಯ್ಯ ಇತ್ತೀ ಚೆಗೆ ತಮ್ಮ ಪತ್ನಿಗಾಗಿ ಖರೀದಿಸಿದ ‘ಥ್ರೆಡ್ ಆಫ್ ಗೋಲ್ಡ್’ ಮಾದರಿಯ ರೇಷ್ಮೆ ಸೀರೆಗೆ ಗ್ರಾಹಕರಿಂದ ಭಾರಿ ಡಿಮಾಂಡ್ ಬರತೊಡಗಿದೆ.
ಮಳಿಗೆಗೆ ಪ್ರತಿದಿನ ಸೀರೆ ಖರೀದಿಗೆ ಬರುವ ಗ್ರಾಹಕರು ‘ಸಿಎಂ ಸೀರೆ ತೋರಿಸಿ’ ಎಂದು ಆಸಕ್ತಿಯಿಂದ ಕೇಳುತ್ತಿ
ದ್ದಾರೆ. ಹಾಗೆ ಕೇಳಿದ ಕೆಲವರು ಸೀರೆ ಯನ್ನು ಖರೀದಿಸಿದರೆ, ಇನ್ನು ಕೆಲವರು ‘ಬೆಲೆ ಜಾಸ್ತಿಯಾಯ್ತು’ ಎಂದು ಹೇಳಿ
ತಮ್ಮ ಬಜೆಟ್ಗೆ ಅನುಗುಣವಾಗಿ ಬೇರೆ ಸೀರೆಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಕೆಎಸ್ಐಸಿ ಅಧ್ಯಕ್ಷ ಡಿ. ಬಸವರಾಜ್
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, “ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿ ದ್ದ ಸಿಎಂ ಸಿದ್ದರಾಮಯ್ಯ ನಗರದ
ಹದಡಿ ರಸ್ತೆಯಲ್ಲಿ ಕೆಎಸ್ಐಸಿ ಶೋ ರೂಂ ಉದ್ಘಾಟಿಸಿ, 1,09,೦೦೦ ರೂ. ಮೌಲ್ಯದ ಸೀರೆ ಖರೀದಿಸಿದ್ದರು. ಈಗ ಶೋ
ರೂಂಗೆ ಬರುವ ಗ್ರಾಹಕರು ಸಿಎಂ ಖರೀ ದಿಸಿದ ಮಾದರಿಯ ಸೀರೆ ಕೊಡಿ ಎಂದು ಕೇಳುತ್ತಿದ್ದಾರೆ. ಈ ಸೀರೆಗೆ ಸಿಎಂ ಸೀರೆ
ಎಂದೇ ನಾಮಕರಣ ಆದಂತಾಗಿದೆ,” ಎಂದರು.
ನಗರದಲ್ಲಿ ಶೋರೂಂ ಶುರುವಾಗಿ 1 ತಿಂಗಳಾಗಿದೆ. ಸಿಎಂ ಖರೀದಿ ಮಾಡಿದ ಘಳಿಗೆ ಚೆನ್ನಾಗಿದ್ದು, ಇಲ್ಲಿ ವ್ಯಾಪಾರ ಚೆನ್ನಾ
ಗಿದೆ. ಈವರೆಗೆ 153 ಸೀರೆ ಮಾರಾಟ ಆಗಿದ್ದು 34.31 ಲಕ್ಷ ರೂ. ವ್ಯಾಪಾರ ಅಗಿದೆ.