ದೊಡ್ಡ ಸುದ್ದಿ

ಕಿಂಗ್‌ಫಿಶರ್‌ನ ಮಲ್ಯ ಈಗ ಪೂರ್ತಿ ಬಡವ!

ಕಿಂಗ್‌ಫಿಷರ್‌ ಸಂಸ್ಥೆಯಿಂದ 6963 ರೂ. ಸಾಲ ವಸೂಲಾತಿ ಆಗಬೇಕಿದೆ. ವಸೂಲಿಗಾಗಿ ಎಸ್‌ಬಿಐ ನೇತೃತ್ವದಲ್ಲಿನ  17 ಬ್ಯಾಂಕ್‌ಗಳ ಒಕ್ಕೂಟ ಕಸರತ್ತು ನಡೆಸುತ್ತಿರೋದು ಗೊತ್ತಿರುವ ವಿಷಯವೇ.

ಹೀಗಿರುವಾಗ ಮೂರ್ನಾಲ್ಕು ಬ್ಯಾಂಕ್‌ಗಳು ತಮ್ಮ ಅಧೀನದಲ್ಲಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಆಸ್ತಿಗಳನ್ನು ಎಆರ್‌ಸಿಗಳಿಗೆ ವಿಕ್ರಯಿಸಲು ಯೋಚಿಸುತ್ತಿವೆ. ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಜಯಮಲ್ಯ ಒಡೆತನದ ಯುನೈಟೆಡ್‌ ಬ್ರೇವರಿಸ್ ಹೋಲ್ಡಿಂಗ್ಸ್‌ ಉದ್ದೇಶಪೂರ್ವಕವಾಗಿಯೇ ಸಾಲ ತೀರಿಸುತ್ತಿಲ್ಲ ಎಂದು ಘೋಷಿಸಿದೆ. ಇದಕ್ಕೂ ಮುನ್ನ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಐ ಕೂಡಾ ಇಂತಹುದೇ ಘೋಷಣೆ ಮಾಡಿವೆ.