ದೊಡ್ಡ ಸುದ್ದಿ

ಮಂಗಳನಲ್ಲಿಗೆ ಕಾಲಿಡಲು ಮೂರೇ ದಿನದ ಪ್ರಯಾಣ!

ಮನುಷ್ಯ ಮಂಗಳನಲ್ಲಿ ಕಾಲಿಡ ಬೇಕೆಂದರೆ ಕನಿಷ್ಠ ೫ ತಿಂಗಳ ಪ್ರಯಾ ಣ ವನ್ನಂತೂ ಮಾಡಲೇಬೇಕು. ಆದರೆ, ನಾಸಾ ವಿeನಿಗಳು ಸಿದ್ಧ ಪಡಿಸುತ್ತಿ ರುವ ಲೇಸರ್ ತಂತ್ರeನ ಯಶಸ್ವಿ ಯಾದರೆ, ಮಂಗಳನ ಅಂಗಳ ರೈಲಿನಲ್ಲಿ ಬೆಂಗಳೂರಿನಿಂದ ದಿಲ್ಲಿಗೆ ಹೋದಷ್ಟು ಸುಲಭವಾಗಲಿದೆ.
ಮೂರೇ ದಿನದಲ್ಲಿ ೯೧ ಕೋಟಿ ಕಿ. ಮೀ. ದೂರದ ಕೆಂಪು ಗ್ರಹವನ್ನು ಫೋಟೋನಿಕ್ ಪ್ರಪಲ್ಶನ್ ತಂತ್ರeನ ಬಳಸಿಕೊಂಡು ತಲುಪುವಂಥ ಲೇಸರ್ ಪ್ರಚೋದಿತ ಗಗನನೌಕೆ ಅಭಿವೃದ್ಧಿ ಯಲ್ಲಿ ನಾಸಾ ತೊಡಗಿದೆ.

ಇಲ್ಲಿ  ಗಗನನೌಕೆಯು ಭೂಮಿ ಮೂಲದ ಲೇಸರ್‌ಗಳನ್ನು ಬಳಸಿ ಕೊಂಡು ಬೆಳ ಕಿನ ಕಣ ಫೋಟಾನ್‌ನ ವೇಗದಲ್ಲಿ ಮುಂದೆ ಸಾಗುತ್ತದೆ ಎಂದು ಸೈನ್ಸ್ ಅಲರ್ಟ್ ಡಾಟ್ ಕಾಂ ವೆಬ್‌ಸೈಟ್ ವರದಿ ಮಾಡಿದೆ. ಈ ಗಗನನೌಕೆಯ ವಿನ್ಯಾಸ ತಯಾರಿಸಿರುವ ನಾಸಾ ವಿeನಿ ಲುಬಿನ್ “ಈ ಯೋಜನೆ ಯಶಸ್ವಿ ಯಾಗುವುದಿಲ್ಲ ಎನ್ನಲು ಕಾರಣಗಳೇ ಇಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.