ದೊಡ್ಡ ಸುದ್ದಿ

ರೈಲ್ವೆ ಬಜೆಟ್ ಎಫೆಕ್ಟ್: 3 ತಾಸುಗಳಲ್ಲಿ ಪ್ರಯಾಣಿಸದಿದ್ದರೆ ಟಿಕೆಟ್ ರದ್ದು!

ನೂತನ ನಿಯಮದ  ಪ್ರಕಾರ 199 ಕಿಲೋ ಮೀಟರ್‌ವರೆಗಿನ ಪ್ರಯಾಣದ ರಿಸರ್ವೇಶನ್‌ ಟಿಕೆಟ್ ಅಲ್ಲದ ಸಾಮಾನ್ಯ ಟಿಕೆಟ್‌  3 ತಾಸು ಮಾತ್ರ ಜೀವಂತವಾಗಿರುತ್ತೆ. ಟಿಕೆಟ್ ಪಡೆದ ಮೂರು ತಾಸುಗಳಲ್ಲಿ ಪ್ರಯಾಣ ಮಾಡದಿದ್ದರೆ ಅ ಟಿಕೆಟ್‌ ರದ್ದಾಗುತ್ತೆ. ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಬುಧವಾರ ಲೋಕಸಭೆಯಲ್ಲಿ  ಮಾಹಿತಿ ನೀಡಿದ್ದಾರೆ. 199 ಕಿ.ಮಿ ದೂರದವರೆಗಿನ ಪ್ರಯಾಣಕ್ಕಾಗಿ ಮುಂಚಿತವಾಗಿ ಟಿಕೆಟ್ ಖರೀದಿಸಿದರೆ, ನಿಗದಿತ ಪ್ರಯಾಣ ಸ್ಥಳದಿಂದ ಮೂರು ಗಂಟೆ ಒಳಗಾಗಿ ರೈಲು ಪ್ರಯಾಣ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಅದು ರದ್ಧಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ  199 ಕಿ.ಮಿ ದೂರದ ಪ್ರಯಾಣಕ್ಕಾಗಿ ವಾಪಸ್ ಬರುವ ಟಿಕೆಟ್  ಮುಂಚಿತವಾಗಿ ಕಾಯ್ದಿರಿಸುವಂತಿಲ್ಲ. ಈಗಾಗಲೇ ಮೊಬೈಲ್ ಫೋನ್‌‌ಗಳ ಮೂಲಕ ಪೇಪರ್ ರಹಿತ ಪ್ಲ್ಯಾಟ್ ಫಾರ್ಮ್ ಟಿಕೆಟ್ ಪಡೆಯುವ ಸೌಲಭ್ಯ  29 ರೈಲು ನಿಲ್ದಾಣಗಳಲ್ಲಿ ಜಾರಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.