ಮಿಲನ ಮಹೋತ್ಸವ ಸಂದರ್ಭದಲ್ಲಿ ತುಸು ಎಡವಟ್ಟಾದರೂ ಎಂತಹ ಘೋರ ಪರಿಣಾಮ ಎದುರಿಸಬೇಕಾದಿತು ಎಂಬುದಕ್ಕೆ ಜರ್ಮನಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇಲ್ಲಿನ ಆಲಿವರ್ ಡೈಟ್‌ಮ್ಯಾನ್ ಎಂಬ 46 ವರ್ಷದ ಮದ್ಯವಯಸ್ಕ, ತನ್ನ ಪತ್ನಿ ರಿಕಾ ವರ್ನಾ ಜೊತೆ ಕಾಮಕ್ರೀಡೆಯಲ್ಲಿ ತೊಡಗಿದ್ದಾಗ ಸೌತೆಕಾಯಿಯನ್ನು ಸೆಕ್ಸ್ ಟಾಯ್ ಆಗಿ ಬಳಸಿ ಆಕೆಯ ಜೀವಕ್ಕೆ ಎರವಾಗಿದ್ದಾನೆ.
ಡೈಟ್‌ಮ್ಯಾನ್ ತನ್ನ ಪತ್ನಿ ವರ್ನಾ ಜೊತೆ ಮಂಚದಾಟದಲ್ಲಿ ಲೀನವಾಗಿದ್ದಾಗ, ಸೌತೆಕಾಯಿಯನ್ನು ಸೆಕ್ಸ್ ಟಾಯ್ ರೀತಿಯಲ್ಲಿ ಬಳಸಿ ಅದನ್ನು ಆಕೆಯ ಬಾಯಿಯಲ್ಲಿಟ್ಟಿದ್ದಾನೆ.ಇದೇ ವೇಳೆ ಅಡುಗೆ ಮನೆಯಿಂದ ಹೊತ್ತಿದ ವಾಸನೆ ಬರತೊಡಗಿದೆ. ತನ್ನ ಸಾಕುನಾಯಿಗೆ ಮಾಂಸ ಬೇಯಿಸಲು ಗ್ಯಾಸ್ ಆನ್ ಮಾಡಿದ್ದ ಡೈಟ್‌ಮ್ಯಾನ್, ಕಾಮಕ್ರೀಡೆಯಲ್ಲಿ ತಲ್ಲೀನನಾಗಿ ಗ್ಯಾಸ್ ಆಫ್ ಮಾಡಲು ಮರೆತು ಹೋಗಿದ್ದ.
ಕೂಡಲೇ ಗ್ಯಾಸ್ ಆಫ್ ಮಾಡಲು ಅಡುಗೆ ಮನೆಗೆ ಹೋದ ಡೈಟ್‌ಮ್ಯಾನ್ ಮರಳಿ ಬರುವಷ್ಟರಲ್ಲಿ ಆತನ ಪತ್ನಿ ವರ್ನಾ ಹೆಣವಾಗಿದ್ದಳು. ಡೈಟ್‌ಮ್ಯಾನ್ ತನ್ನ ಪತ್ನಿ ವರ್ನಾ ಬಾಯಲ್ಲಿ ಇಟ್ಟಿದ್ದ ಸೌತೆಕಾಯಿ ಆಕೆಯ ಗಂಟಲಲ್ಲಿ ಇಳಿದು ಉಸಿರಾಟ ನಿಂತು ಹೋಗಿದ್ದರಿಂದ ವರ್ನಾ ಅರೆಪ್ರಜ್ಞಾವಸ್ಥೆ ತಲುಪಿದ್ದಳು.
ಕೂಡಲೇ ವರ್ನಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸೂಕ್ತ ಉಸಿರಾಟದ ವ್ಯವಸ್ಥೆ ಇಲ್ಲದೇ ವರ್ನಾ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾಳೆ. ಇನ್ನು ಪತ್ನಿಯನ್ನು ಕೊಂದ ಆರೋಪದ ಮೇಲೆ ಡೈಟ್‌ಮ್ಯಾನ್ ಜೈಲು ಪಾಲಾಗಿದ್ದಾನೆ.