ದೀರ್ಘ ಅವಧಿಯ ನಂತರ ತೆರೆಗೆ ಬರುತ್ತಿರುವ ಪೂಜಾ ಭಟ್ ಈ ಬಾರಿ ತಮ್ಮ ತಂದೆ ಮಹೇಶ್ ಭಟ್ ಬರೆಯಲಿರುವ ಕಥೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.1989ರಲ್ಲಿ ತೆರೆಗೆ ಬಂದಿದ್ದ ಮಹೇಶ್ ಭಟ್ ನಿರ್ದೇಶನದ ‘ಡ್ಯಾಡಿ’ ಚಿತ್ರದಲ್ಲಿ ಮದ್ಯವೆಸನಿ ತಂದೆಯನ್ನು ಪ್ರೀತಿಯಿಂದ ಸರಿಪಡಿಸುವ ಪಾತ್ರವನ್ನು ನಿರ್ವಹಿಸಿದ್ದ ಪೂಜಾ ಇದೀಗ ಅದಕ್ಕೆ ತದ್ವಿರುದ್ಧವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇನ್ನು ಇಷ್ಟು ದಿನ ಸಿನಿಅಂಗಳದಿಂದ ದೂರು ಉಳಿದಿದ್ದ ಪೂಜಾ ಅವರಿಗೆ ಸಾಕಷ್ಟು ಜನರು ಮತ್ತೆ ಸ್ಕ್ರೀನ್ ಮೇಲೆ ಬರಲು ಸಲಹೆ ನೀಡಿದ್ದರಂತೆ ಅದರಂತೆ ಅವರ ತಂದೆಯವರೆ ಬರೆಯುವ ಕತೆಗೆ ಮತ್ತೆ ಬಣ್ಣ ಹಚ್ಚಲಿದ್ದಾರಂತೆ.