ಸ್ಟ್ರೈಟ್ ಲೆಗ್
ಸ್ಟ್ರೈಟ್-ಲೆಗ್ ಮತ್ತು ತೆಳುವಾದ ವಾಶ್ ಮಾಡಿದ ಜೀನ್ಸ್ ಅತ್ಯಂತ ಜನಪ್ರಿಯವಾಗಿದೆ. ಕಡಿಮೆ ಬೆಲೆ, ಹೆಚ್ಚು ಕಾಲ ಬಾಳಿಕೆ ಮತ್ತು ಯಾವ ಕಾಲಕ್ಕೂ ಒಪ್ಪುವುದರಿಂದಲೇ ಇದರ ಖರೀದಿದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಂಪ್ರದಾಯಿಕ ಶೈಲಿ ಮತ್ತು ಹೆಚ್ಚು ಬಾಳಿಕೆ ಬರುವುದರಿಂದ ಪ್ರತ್ಯೇಕವಾಗಿ ಕಾಣದೆ, ಮೂಲ ಸ್ವರೂಪವನ್ನು ಕಳೆದುಕೊಂಡಿದ್ದರೂ ಇದನ್ನು ಎಲ್ಲರೂ ಇಷ್ಟ ಪಡುತ್ತಾರೆ. ತೊಡೆ ಭಾಗದಲ್ಲಿ ಒಂದಿಷ್ಟು ಬಣ್ಣಗೆಟ್ಟ ಚಿತ್ತಾರವಿದ್ದರೆ ಆಗ ಇನ್ನಷ್ಟು ಆಕರ್ಷಕವಾಗಿ ಅದು ಕಾಣುತ್ತದೆ.
ಸೆಲ್ವೆಡ್ಜ್
ಕಳೆದ ಕೆಲವು ವರ್ಷಗಳಿಂದ ಸೆಲ್ವೆಡ್ಜ್ ಫ್ಯಾಬ್ರಿಕ್ನ ಡೆನಿಮ್ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತಿದೆ. ಮಾಮೂಲಿ ಜೀನ್ಸ್ಗಿಂತ ಹೆಚ್ಚು ದಪ್ಪ ಹಾಗೂ ಗಡಸು ಆಗಿರುವುದು ಇದಕ್ಕೆ ಕಾರಣ. ಆದರೆ ಬೇಸಿಗೆ ಕಾಲದಲ್ಲಿ ಇದನ್ನು ಧರಿಸುವುದು ಸೂಕ್ತವಲ್ಲ. ಇದರ ದೊಡ್ಡ ಸಮಸ್ಯೆಯೆಂದರೆ ತನ್ನ ಹೆವಿ ನೇಚರ್ನಿಂದಾಗಿಯೇ ಇದು ಕೆಲವೇ ತಿಂಗಳಲ್ಲಿ ಪೇಲವವಾಗಿ ಬಿಡುತ್ತದೆ.
ತಿನ್ ಆಂಡ್ ಸ್ಟ್ರೇಚ್ಚಿ
ಅಮೆರಿಕದ ದನಗಾಹಿಗಳು ಮತ್ತು ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಇದನ್ನು ಮೊದಲಿಗೆ ಧರಿಸುತ್ತಿದ್ದರೆ. ಮುಖ್ಯವಾಗಿ ಕಪ್ಪು ವರ್ಣದವರಿಗೆ ಇದು ಹೆಚ್ಚು ಹೊಂದುತ್ತದೆ. ರಾತ್ರಿ ಪಾರ್ಟಿ ಮತ್ತು ಡಿನ್ನರ್ಗೆ ಇದನ್ನು ಧರಿಸಿ ಹೋದರೆ ಲಗ್ಷುರಿಯಸ್ ಲುಕ್ ನಿಮ್ಮದಾಗುತ್ತದೆ. ಒಟ್ಟಿನಲ್ಲಿ ಡೆನಿಮ್ ಖರೀದಿಸುವಾಗ ಕೇವಲ ದೇಹಕ್ಕೆ ಫಿಟ್ ಆದರೆ ಸಾಕು ಎಂಬ ಭಾವನೆ ಬಿಟ್ಟು ಅದರ ಬಟ್ಟೆಯ ಬಗ್ಗೆಯೂ ಗಮನ ನೀಡಿ.













