ಹೌದು, ನೀಲಿ ಜಗತ್ತನ್ನು ಬಿಟ್ಟು ಬಾಲಿವುಡ್ಗೆ ಬಂದು ಮನೆ ಮಾಡಿಕೊಂಡಿರುವ ಸನ್ನಿ ಲಿಯೋನ್ ಮರಳಿ ನೀಲಿ ಜಗತ್ತನ್ನು ಮರೆತು ಇಲ್ಲಿಯೇ ಮನೆ ಮಾಡಿಕೊಂಡಿದ್ದಾಳೆ. ಇದೀಗ ಅವರ ಹಾದಿಯನ್ನೆ ತುಳಿದಿರುವ ಪೋರ್ನ್ ನಟಿ ಲೂಸಿ ಪಿಂಡರ್.
ಬಾಲಿವುಡ್ನಲ್ಲಿ ತನ್ನ ಮಾದಕ ಹಾಗೂ ಮೈಮಾಟ ಪ್ರದರ್ಶನದಿಂದ ಪಡ್ಡೆ ಹುಡುಗರ ಬಿಸಿದೋಸೆಯಾಗಿರುವ ಸನ್ನಿಗೆ ಈ ನಟಿ ಪೈಪೋಟಿ ನೀಡಲು ಬರುತ್ತಿದ್ದಾಳೆ ಎಂದು ಬಾಲಿವುಡ್ನಲ್ಲಿ ಬಹಳ ದಿನಗಳಿಂದಲೂ ಹವಾ ಕ್ರಿಯೇಟ್ ಮಾಡಿದೆ.
ಬಹಳ ದಿನಗಳಿಂದ ಲೂಸಿ ಪಿಂಡರ್ ಹೆಸರು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಲೆ ಇದೆ. ಅಲ್ಲದೆ ಬಾಲಿವುಡ್ನಲ್ಲಿ ಮಿಂಚುವ ಉದ್ದೇಶದಿಂದ ಇತ್ತೀಚೆಗೆ ಲೂಸಿ ಹಿಂದಿ ಕಲಿಕೆಯಲ್ಲಿ ಆಸಕ್ತಿಯನ್ನು ವಹಿಸಿದ್ದರು ಎಂಬ ಸುದ್ದಿಗಳು ಹರಿದಾಡಿದ್ದವು.
ಇನ್ನು ಬ್ರಿಟಿಶ್ ಮಾಡೆಲ್ ಆಗಿರುವ ಲೂಸಿ ಭಾರತದ ಚಿತ್ರಗಳಲ್ಲಿ ನಟಿಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂತಲೂ ಸಹ ಹೇಳಲಾಗುತ್ತಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಲೂಸಿ ಪಾರ್ನ್ ಸಿನಿ ಜಗತ್ತಿನಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮೇಲಿನ ಎಲ್ಲ ಅಂಶಗಳನ್ನು ಗಮನಿಸಿದಾಗ ಬಾಲಿವುಡ್ನಲ್ಲಿ ಬಿಗ್ ಎಂಟ್ರಿ ನೀಡಲು ಲೂಸಿ ಹಾತೊರೆಯುತ್ತಿದ್ದಾಳೆ ಎಂತಲೇ ಹೇಳಬಹುದು.