ಹಳದಿ ಮೂತ್ರದ ಸಮಸ್ಯೆಗೆ ಮನೆಯಲ್ಲಿಯೇ ಮಾಡಬಹುದಾದ ಕೆಲವು ಪರಿಹಾರಗಳಿವೆ.
ಹೈಡ್ರೊಥೆರಪಿ: ಹಳದಿ ಮೂತ್ರದ ಸಮಸ್ಯೆಗೆ ಹೈಡ್ರೊಥೆರಪಿಯು ಉತ್ತಮ ಪರಿಹಾರವಾಗಿದೆ. ಈ ಸಮಸ್ಯೆಗೆ ಮುಖ್ಯ ಕಾರಣವೆಂದರೆ ದೇಹದಲ್ಲಿ ಕಂಡು ಬರುವ ನಿರ್ಜಲೀಕರಣ. ಆದ್ದರಿಂದ ನೀವು ದಿನಾ ಯಥೇಚ್ಛ ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಗತ್ಯ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಂಡು ಬರುವುದಿಲ್ಲ. ಹಾಗೂ ಮೂತ್ರ ವಿಸರ್ಜನೆ ವೇಳೆ ಉಂಟಾಗುವ ನೋವೂ ಕಡಿಮೆಯಾಗುತ್ತದೆ.
ಬ್ಲೂಬೆರ್ರಿ ಹಣ್ಣಿನ ರಸ: ಮೂತ್ರಕೋಶದ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ನಿರ್ಮೂಲನೆಗೆ ಅತ್ಯಧಿಕ ಪ್ರಮಾಣದ ಆಂಟಿಆಕ್ಸಿಡೆಂಟ್ಗಳು ಮತ್ತು ಸಂಯುಕ್ತ ವಸ್ತುಗಳು ಅತ್ಯಗತ್ಯ. ಬ್ಲೂಬೆರ್ರಿ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿದೆ. ಆದ್ದರಿಂದ ಈ ಹಣ್ಣಿನ ರಸದ ಸೇವನೆಯು ಈ ಸಮಸ್ಯೆಗೆ ಉತ್ತಮ ಪರಿಣಾಮ ಬೀರುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಬ್ಲೂಬೆರ್ರಿ ರಸ ಅಥವಾ ಕತ್ತರಿಸಿದ ಬ್ಲೂಬೆರ್ರಿ ಹಣ್ಣುಗಳನ್ನು ಸೇವಿಸಬಹುದು.
ಬೇಕಿಂಗ್ ಸೋಡ: ಇದು ಮೂತ್ರದಲ್ಲಿರುವ ಆಮ್ಲೀಯತೆಯನ್ನು ತಟಸ್ಥಗೊಳಿಸುತ್ತದೆ ಮತ್ತು ಮೂತ್ರಕೋಶ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಬೇಕಿಂಗ್ ಸೋಡ ಒಂದು ನೈಸರ್ಗಿಕ ಕ್ಷಾರ ಕೂಡಾ ಆಗಿದ್ದು, ಒಂದು ಲೋಟ ನೀರಿಗೆ ಒಂದು ಟೀ ಚಮಚ ಬೇಕಿಂಗ್ ಸೋಡ ಬೆರೆಸಿ ಕುಡಿದರೆ ಹಳದಿ ಮೂತ್ರದ ಸಮಸ್ಯೆಯನ್ನು ತಡೆಯಬಹುದು.
ವಿಟಮಿನ್ ಸಿ: ಮೂತ್ರಕೋಶದ ಆರೋಗ್ಯವನ್ನು ಕಾಪಾಡಲು ಅಗತ್ಯವಾಗಿರುವ ಪೋಷಕಾಂಶವಿದು. ಇದರಲ್ಲಿ ಗಮನಾರ್ಹ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ಗಳಿವೆ. ಇದು ಮೂತ್ರಕೋಶದ ಮೇಲೆ ಆಮ್ಲೀಯತೆ ಉಂಟು ಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ವಿಟಮಿನ್ ಸಿ ಯ ಆಗರವಾಗಿರುವ ಕಲ್ಲಂಗಡಿ ಹಣ್ಣು, ಅನಾನಾಸು, ಕಿತ್ತಳೆ, ರಸ್ಬೆರ್ರಿ ಮತ್ತು ಪಪ್ಪಾಯ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.
ಶುಂಠಿ: ಇದೊಂದು ಉರಿ ನಿರೋಧಕ ಸಾಂಬಾರು ಪದಾರ್ಥವಾಗಿದ್ದು, ಇದರಲ್ಲಿ ನಾರಿನಂಶ ಅತ್ಯಧಿಕ ಪ್ರಮಾಣದಲ್ಲಿದೆ. ಈ ಕಾರಣದಿಂದ ಇದು ಮೂತ್ರಕೋಶದಲ್ಲಿ ಕಾಣಿಸಿಕೊಳ್ಳುವ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹಳದಿ ಮೂತ್ರದ ಸಮಸ್ಯೆಯನ್ನು ದೂರ ಮಾಡುತ್ತದೆ. ಆದ್ದರಿಂದ ದಿನಾ ಶುಂಠಿ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
ನಿಮ್ಮನ್ನು ಖಿನ್ನತೆಗೊಳಮಾಡುವ ಹಳದಿ ಮೂತ್ರದ ನಿವಾರಣೆಗೆ ಮೇಲಿನ ಪರಿಹಾರವನ್ನು ಪ್ರಯೋಗಿಸಿ ಮನೆಯಲ್ಲಿಯೇ ಮದ್ದು ತಯಾರಿಸಿಕೊಂಡು ಪರಿಹಾರ ಕಂಡುಕೊಳ್ಳಬಹುದು.